ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಆದ್ಯತೆ

19 09 2025_BGR_RURAL_PAGE_5B
ಆನೇಕಲ್​ ತಾಲೂಕಿನ ಬನ್ನೇರುಟ್ಟದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಪೊ.ಬಿ.ಕೃಷ್ಣಪ್ಪ ಟ್ರಸ್ಟ್​ನ ಇಂದಿರಾ ಕೃಷ್ಣಪ್ಪ, ಬನ್ನೇರುಟ್ಟ ಇನ್​ಸ್ಪೆಕ್ಟರ್​ ಕೃಷ್ಣಕುಮಾರ್​, ಮುಖಂಡರಾದ ಸಿದ್ದಪ್ಪ ಕಾಂಬಳೆ, ನಾಗಣ್ಣ ಬಡಿಗೇರ್​, ಬಿ.ಎಂ.ಮಂಜುನಾಥ್​ ಇತರರಿದ್ದರು.
Published on

ಆನೇಕಲ್​ : ದಲಿತ ಸಂರ್ಷ ಸಮಿತಿಯು ಬಡವರ, ಹಿಂದುಳಿದವರ ಮತ್ತು ದಲಿತರ ಹಕ್ಕು ಪಡೆಯಲು ಇರುವ ಸಂಟನೆಯಾಗಿದೆ. ಅಂಬೇಡ್ಕರ್​ ಮೂಲಮಂತ್ರಗಳಾದ ಶಿಣ, ಸಂಟನೆ, ಹೋರಾಟಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಪೊ.ಬಿ.ಕೃಷ್ಣಪ್ಪ ಟ್ರಸ್ಟ್​ ನ ಇಂದಿರಾ ಕೃಷ್ಣಪ್ಪ ಹೇಳಿದರು.

ಬನ್ನೇರುಟ್ಟದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಅಂಬೇಡ್ಕರ್​ ವಾದ) ಸಂಟನೆಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ದಲಿತ ಸಂರ್ಷ ಸಮಿತಿಯು ವಿವಿಧ ಹಂತ ದಾಟಿದೆ. ಪೊ.ಬಿ.ಕೃಷ್ಣಪ್ಪ ಅಂದಿನ ಕಾಲದಲ್ಲಿ ಜಾತಿ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ್ದು ಮೊದಲ ಹಂತ. ನಂತರದ ದಿನಗಳಲ್ಲಿ ಶೋಷಣೆಯ ವಿರುದ್ಧ, ಭೂಮಿಗಾಗಿ, ವಸತಿಗಾಗಿ, ವಸತಿ ಗೃಹಕ್ಕಾಗಿ ಹೋರಾಟ ನಡೆಸಿದರು. ಹಲವು ಹಂತಗಳು ದಾಟಿದರೂ ದಸಂಸ ತನ್ನ ಮೂಲ ಉದ್ದೇಶವಾಗಿರುವುದು ಸಮ ಸಮಾಜದ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಮೂಡಿಸಲು ಸಂಟನೆಗಳು ಶ್ರಮಿಸಬೇಕು ಎಂದರು.

ದಲಿತ ಸಂರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್​ ಮಾತನಾಡಿ, ಸ್ವಾತಂತ್ರ$್ಯ ಬಂದು ಏಳು ದಶಕಗಳು ಕಳೆದರೂ ಅಸ್ಪ-ೃಶ್ಯತೆ, ಜಾತೀಯತೆ ಇರುವುದು ಖಂಡನೀಯ. ಸಮ ಸಮಾಜದ ನಿರ್ಮಾಣ ನಮ್ಮೆಲ್ಲರ ಗುರಿ. ಪ್ರತಿಯೊಬ್ಬರಿಗೂ ಉತ್ತಮ ಶಿಣ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸಂಟನೆಯಲ್ಲಿನ ಪದಾಧಿಕಾರಿಗಳಿಗೆ ಶಿಣ, ಹೋರಾಟ ಮತ್ತು ಸಂಟನೆಯ ಮಹತ್ವ ತಿಳಿಸಲು ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಆಯೋಜಿಸಲಾಗಿದೆ ಎಂದರು.

ಮಣಿಪಾಲ್​ ರಾಜಪ್ಪ, ದಶರಥ್​, ಸಂಪಂಗಿರಾಮ್​, ರಮೇಶ್​, ಇರೇಶ್​, ಕಾರೆಹಳ್ಳಿ ಶ್ರೀನಿವಾಸ್​, ಹುಸೇನಪ್ಪ ಇದ್ದರು. ಲೇಖಕ ರಾಜಶೇಖರಮೂರ್ತಿ ಅವರು ದಸಂಸ ಹೋರಾಟದಲ್ಲಿ ಹಿರಿಯರ ನೆನಪು ಮತ್ತು ದಲಿತ ಚಳವಳಿಯ ಮುಂದಿನ ಗುರಿಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀಪಾದ್​ ಭಟ್​ ಅವರು ಸಂವಿಧಾನ, ಜಾತ್ಯತಿತ ಮತ್ತು ಕೋಮುವಾದ ವಿಷಯ ಮಂಡನೆ ಮಾಡಿದರು. ಸುಂದರ್​ ಮಾಸ್ತರ್​, ಜೀವೇಶ್​ ಹಿರಿಯೂರು, ಕುಂದೂರು ಮುರಳಿ ಅವರು ವಿಚಾರಗಳನ್ನು ವಿನಿಮಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net