ವಿಮೆ, ಮೂಲಸೌಕರ್ಯಕ್ಕೆ ಆದ್ಯತೆ - ಜಾತ್ರೆ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನರ ರಕ್ಷಣೆಗೆ ಹೆಚ್ಚಿನ ಒತ್ತು

PTR_6 APR_4
Published on

ಪುತ್ತೂರು: ಜನ ಜಂಗುಳಿ ಪ್ರದೇಶದಲ್ಲಿ ಆಪತ್ಕಾಲಿನ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಕಲ್ಪಿಸಬೇಕು.. ಮಳಿಗೆ ಹಾಕುವವರಿಗೆ ಹಾಗೂ ಸೇರುವ ಜನ ಸಮೂಹಕ್ಕೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಜನದಟ್ಟಣೆಯಲ್ಲಿ ಅವಘÀಡಗಳಾದರೆ ಸರ್ಕಾರಕ್ಕೆ, ಧಾರ್ಮಿಕ ಕೇಂದ್ರಕ್ಕೆ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಸಾರ್ವಜನಿಕ ನಷ್ಟ ಪರಿಹಾರ ವಿಮಾ ಸೌಲಭ್ಯ ಅಳವಡಿಸಬೇಕೆಂಬ ಆಗ್ರಹ ಸಾಮಾಜಿಕ ಹೋರಾಟಗಾರರಿಂದ ಕೇಳಿ ಬರುತ್ತಿದೆ.

ಪ್ರಸಿದ್ಧ ಕ್ಷೇತ್ರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭಲಕ್ಷಾAತರ ಮಂದಿ ಭಾಗವಹಿಸುತ್ತಾರೆ. ಜನದಟ್ಟಣೆಯ ನಿರ್ವಹಣೆ ಬಗ್ಗೆ 2014ರಲ್ಲಿ ರಾಷ್ಟಿçÃಯ ವಿಪತ್ತು ನಿರ್ವಹಣಾ ಪ್ರಾಽಕಾರ ಮಾರ್ಗ ಸೂಚಿಯನ್ನು ರಚಿಸಿ ರಾಜ್ಯಗಳಿಗೆ ರವಾನಿಸಿದೆ. ಆದರೆ ಸರ್ಕಾರ ಇನ್ನೂ ಇಂತಹ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಗೆ ಸಮರ್ಪಕ ವ್ಯವಸ್ಥೆಗಳನ್ನು ಮಾಡಿಕೊಂಡಿಲ್ಲ. ಅಗತ್ಯ ವ್ಯವಸ್ಥೆಯನ್ನು ಮಾಡುವಂತೆ ಇಲಾಖೆಯ ಅಽಕಾರಿಗಳಿಗೆ ಡಿ. ಕೆ. ಭಟ್ ಪತ್ರ ಬರೆದಿದ್ದಾರೆ.

ಜಾತ್ರಾ ಕಾರ್ಯಕ್ರಮಗಳಲ್ಲಿ ಸಂತೆ ಹಾಕುವುದಕ್ಕೆ ವಿವಿಧ ಊರಿನಿಂದ ಜನರು ಆಗಮಿಸುತ್ತಿದ್ದು, ಅವರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪ್ರತೀ ಬಾರಿಯೂ ಜಿಲ್ಲಾಡಳಿತ ಹಾಗೂ ಸ್ಥಳಿಯಾಡಳಿತ ವಿಫಲವಾಗುತ್ತಿದೆ. ಈ ಮೂಲಕ ಸ್ವಚ್ಛತೆಗೆ ಸಮಸ್ಯೆಯಾಗುವ ಜತೆಗೆ ಎಲ್ಲೆಂದರಲ್ಲಿ ಮಲಿನ ಮಾಡಲಾಗುತ್ತದೆ. ಹರಾಜಿನಲ್ಲಿ ಅಂಗಡಿ ಮಳಿಗೆಗಳನ್ನು ಪಡೆದುಕೊಳ್ಳುವವರಿಗೆ ಶುದ್ಧ ಕುಡಿಯುವ ನೀರು, ಸ್ನಾನ ಗೃಹ, ಶೌಚಗೃಹಗಳ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಸಂಬAಧಪಟ್ಟ ಅಽಕಾರಿಗಳಿಗೆ ರಾಜೇಶ್ ಕೃಷ್ಣ ಪ್ರಸಾದ್ ಪತ್ರ ಬರೆದಿದ್ದಾರೆ.

ಜನ ಜಂಗುಳಿ ಸಂದರ್ಭ ಸಣ್ಣ ಪುಟ್ಟ ಅವಘಡಗಳು ನಡೆದರೂ ಅದರ ಜವಾಬ್ದಾರಿಯನ್ನು ಆಯಾ ಧಾರ್ಮಿಕ ಕೇಂದ್ರ ಅಥವಾ ಸರ್ಕಾರ ಭರಿಸುವ ಮೂಲಕ ಆರ್ಥಿಕ ಹೊರೆಯನ್ನು ಹೊರಬೇಕಾಗುತ್ತದೆ. ಲಕ್ಷಾಂತರ ರೂ.ಮೊತ್ತವನ್ನು ಅನಗತ್ಯವಾಗಿ ಖರ್ಚು ಮಾಡುವ ಸಮಯದಲ್ಲಿ ವಿಮೆಗಾಗಿ ಸಾವಿರ ರೂಪಾಯಿಯನ್ನು ಭರಿಸಬಹುದಲ್ಲಾ ಈ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆಯನ್ನು ನೀಡಬಹುದಲ್ಲಾ ಎಂಬ ಕಾಳಜಿ ಹೋರಾಟಗಾರರದ್ದಾಗಿದೆ.

ಜಾತ್ರೆಗೆ 319 ಸ್ಟಾಲ್!
ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಬಾರಿ 319 ಸ್ಟಾಲ್‌ಗಳಿಗೆ ಗುರುತು ಹಾಕಿ ಏಲಂ ಪ್ರಕ್ರಿಯೆಯನ್ನು ಮಾ.26ಕ್ಕೆ ಮುಗಿಸಲಾಗಿದೆ. ಹೆಚ್ಚಿನ ಎಲ್ಲ ಸ್ಟಾಲ್‌ಗಳೂ ಬಿಡ್ ಮೂಲಕ ವಿತರಣೆ ಮಾಡಲಾಗಿದೆ. ಇದರಲ್ಲಿ ತಲಾ ಇಬ್ಬರಂತೆ ಕೆಲಸ ನಿರ್ವಹಿಸಿದರೂ, ಕನಿಷ್ಠ 600 ಮಂದಿ ಇರಲಿದ್ದಾರೆ. ಅವರಿಗೆ ಅಗತ್ಯ ನೀರಿನ ವ್ಯವಸ್ಥೆಯನ್ನು ದೇವಸ್ಥಾನದ ಕಡೆಯಿಂದಲೇ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಸದ್ಯ 20 ಶೌಚಗೃಹವಿದ್ದು, ತಾತ್ಕಾಲಿಕ ನೆಲೆಯಲ್ಲಿ 10 ಶೌಚಗೃಹ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ.

ಜಾತ್ರೆಗಳಲ್ಲಿ ಮಳಿಗೆಗಳನ್ನು ಹಾಕುವ ವ್ಯಾಪಾರಸ್ಥರು ವಾರಗಟ್ಟಲೆ ಅಲ್ಲಿರಬೇಕಾಗುತ್ತದೆ. ಪರವೂರಿನವರು ಕುಟುಂಬ ಸಹಿತವಾಗಿ ಆಗಮಿಸುತ್ತಾರೆ. ಅವರಿಗೆ ಶೌಚಗೃಹ, ಶುದ್ಧನೀರಿನಂತಹ ಮೂಲಸೌಕರ್ಯ ಒದಗಿಸುವುದು ವ್ಯವಸ್ಥಾಪಕರ ಜವಾಬ್ದಾರಿ. ಆಹಾರ ಮಳಿಗೆಗಳೇ ಹೆಚ್ಚಿರುವಾಗ ಶುದ್ಧನೀರಿಲ್ಲದೆ ತಯಾರಾದ ಆಹಾರಗಳನ್ನು ಸೇವಿಸಿದರೆ, ಆರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಬೀರಬಹುದು. ಈ ವರ್ಷ ಬಿಸಿಲಿನ ತಾಪದಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಏಲಂ ಮೂಲಕ ಅತೀಹೆಚ್ಚು ಹಣಕೊಟ್ಟು ಮಳಿಗೆಗಳನ್ನು ಪಡೆದವರಿಗೆ ಸ್ವಚ್ಛವಾದ ಸ್ನಾನಗೃಹ ಮತ್ತು ಶೌಚಗೃಹಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಅಲ್ಲೇ ಗಲೀಜು ಮಾಡುವ ಅಪಾಯವಿದೆ.
| ರಾಜೇಶ್ ಕೃಷ್ಣಪ್ರಸಾದ್
ಸಾಮಾಜಿಕ ಹೋರಾಟಗಾರರು.

ವಿಪತ್ತು ನಿರ್ವಹಣೆ ವಿಚಾರದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ 2023 ಡಿ.5ಕ್ಕೆ ಜಿಲ್ಲಾಡಳಿತಕ್ಕೆ ಕೇಳಿಕೊಂಡರೂ, ಯಾವುದೇ ಸ್ಪಂದನೆ ಸಿಗದ ಕಾರಣ 2024 ಜ. 11ರಂದು ಸಚಿವ ರಾಮಲಿಂಗ ರೆಡ್ಡಿಯವರಿಗೆ ಮಿಂಚAಚೆ ಕಳುಹಿಸಲಾಗಿದೆ. ಇದರಲ್ಲಿ ಧಾರ್ಮಿಕ ಕೇಂದ್ರದ ಎಲ್ಲ್ಲ ಸಿಬ್ಬಂದಿಗೆ ಅಪಘಾತ ವಿಮೆ, ಸಾರ್ವಜನಿಕ ನಷ್ಟ ಪರಿಹಾರ ವಿಮೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಕೋರಲಾಗಿದೆ.
| ದಿನೇಶ್ ಭಟ್ ಕೆ.
ಸಾಮಾಜಿಕ ಹೋರಾಟಗಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net