ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪನೆಗೆ ಆದ್ಯತೆ

8kdr3
Published on

ಕಡೂರು: ಗ್ರಾಮದಲ್ಲಿ ಶುದ್ಧ ಕುಡಿಯವ ನೀರಿನ ಘಟಕ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲೂಕಿನ ಕೊತ್ತಿಗೆರೆ ಗ್ರಾಮದಲ್ಲಿ ಶುದ್ಧಗಂಗಾ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದ ಜನರ ಬಹು ದಿನಗಳ ಬೇಡಿಕೆಯಂತೆ ಘಟಕ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 12 ಲಕ್ಷ ರೂ.ನೀಡಲಲಾಗಿದೆ. ಭೂ ಸೇನಾ ನಿಗಮದಿಂದ ಗುಣಮಟ್ಟದ ಕಾಮಗಾರಿ ನಡೆಸಲಾಗಿದೆ. ಜನರು ಆರೋಗ್ಯದ ದೃಷ್ಠಿಯಿಂದ ಶುದ್ಧಗಂಗಾ ಘಟಕಗಳ ಬೇಡಿಕೆ ಹೆಚ್ಚಾಗಿವೆ. ಈಗಾಗಲೇ 12 ಶುದ್ಧಗಂಗಾ ಘಟಕಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಇನ್ನು 10 ಘಟಕಗಳ ನಿರ್ಮಾಣಕ್ಕೆ ಶೀಘ್ರದಲ್ಲಿ ಅನುದಾನ ನೀಡಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಶರತ್‌ಕೃಷ್ಣಮೂರ್ತಿ ಮಾತನಾಡಿ, ಕೊತ್ತಿಗೆರೆ ಗ್ರಾಮಕ್ಕೆ ಶುದ್ಧಗಂಗಾ ಘಟಕದ ಅವಶ್ಯಕತೆಯನ್ನು ಮನಗಂಡ ಶಾಸಕ ಆನಂದ್ ತಮ್ಮ ಅನುದಾನದಲ್ಲಿ ಶುದ್ಧಗಂಗಾ ಘಟಕ ಸ್ಥಾಪನಗೆ ಹಣ ನೀಡಿದ್ದಾರೆ. ಯಗಟಿ ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ಹುಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊತ್ತಿಗೆರೆ ಚಂದ್ರಪ್ಪ, ಪಿಡಿಒ ಮಂಜಪ್ಪ, ಸದಸ್ಯರಾದ ಮಹಾಲಿಂಗಪ್ಪ, ಸ್ವರ್ಣ, ಸಾವಿತ್ರಮ್ಮ, ಸಂತೋಷ್, ಮುಖಂಡರಾದ ತಿಪ್ಪೇಶಪ್ಪ, ತಮ್ಮಯ್ಯ, ಭೂಸೇನಾ ನಿಗಮದ ಎಇಇ ಅಶ್ವಿನಿ, ಗಿರೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net