

ಮರಿಯಮ್ಮನಹಳ್ಳಿ: ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯಾದರೆ ಗ್ರಾಮಗಳು ಪ್ರಗತಿ ಹೊಂದುತ್ತವೆ. ಹಾಗಾಗಿ ಕಂಪನಿಯಿಂದ ಸಾರ್ವಜನಿಕರಿಗೆ ಅವಶ್ಯವಿರುವ ಮೂಲಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಬಿಎಂಎಂ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಗಣೇಶ್ ಹೆಗಡೆ ಹೇಳಿದರು.
ಗುಂಡಾ ತಾಂಡಾದಲ್ಲಿ ಬಿಎಂಎಂ ಕಂಪನಿಯಿಂದ ಮಂಗಳವಾರ 65 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಸಂಗ್ರಹ ತೊಟ್ಟಿ, ಕೊಳವೆ ಬಾವಿ, ಶಾಲಾ ಕಟ್ಟಡ, ಸಮುದಾಯ ಭವನ, ವೈಯಕ್ತಿಕ ಶೌಚಗೃಹ, ಉದ್ಯಾನಗಳು ಸೇರಿ ಪ್ರಮುಖ ಕಾಮಗಾರಿಗಳನ್ನು ಕಂಪನಿಯಿಂದ ಮಾಡಲಾಗಿದೆ. ಅಲ್ಲದೆ ಗ್ರಾಪಂ ಆಡಳಿತ ಹಾಗೂ ಸಾರ್ವಜನಿಕರ ಕೋರಿಕೆಯಂತೆ ಕೋಟ್ಯಂತರ ರೂ. ವೆಚ್ಚದಲ್ಲಿ ಹಳ್ಳಿಗಳ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಗುಂಡಾ ತಾಂಡದಲ್ಲಿ ಲಂಬಾಣಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ದೀಪ್ಲಿಬಾಯಿ ನಾರಾಯಣ್ ನಾಯ್ಕ, ಸದಸ್ಯರಾದ ಗುಂಡಾ ಕೃಷ್ಣ, ಲಕ್ಷ್ಮೀ ಕುಮಾರ ನಾಯ್ಕ, ಕೃಷ್ಣನಾಯ್ಕ, ಕಿಚಿಡಿ ಕೊಟ್ರೇಶ್, ಎಲ್.ಮಂಜುನಾಥ, ಮಜ್ಗಿ ನಾಗರಾಜ್, ಡಾವು ತಿಮ್ಮಾನಾಯ್ಕಾ, ಭೀಮನಾಯ್ಕ, ಡಾಕ್ಯ ಹನುಮನಾಯ್ಕ, ವೆಂಕಟೇಶ್ ನಾಯ್ಕ, ಹೆಮುನಾ ನಾಯ್ಕ, ರೇಖ್ಯಾನಾಯ್ಕಾ, ರಾಮಸ್ವಾಮಿ, ಪೂಲ್‌ಸಿಂಗ್ ನಾಯ್ಕ, ಲಿಂಗರಾಜ್, ಮಂಜುನಾಥ ಚಿಕ್‌ಮಠ, ಗಿರೀಶ್, ಅರುಣ್ ಇತರರಿದ್ದರು.