ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಆದ್ಯತೆ: ಗೋಪಾಲಕೃಷ್ಣ ಬೇಳೂರು

3 sgr 2
ಸಾಗರದ ವಾರ್ಡ್‌ವೊಂದರಲ್ಲಿ 96 ಲಕ್ಷ ರೂ. ವೆಚ್ಚದ ನಗರೋತ್ಥಾನ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಗಣಪತಿ ಮಂಡಗಳಲೆ, ಲಲಿತಮ್ಮ, ಮಧುಮಾಲತಿ, ಸೈಯದ್ ಜಾಕೀರ್ ಇತರರಿದ್ದರು.
Published on

ಸಾಗರ: ಅಭಿವೃದ್ಧಿ ವಿಷಯದಲ್ಲಿ ನಗರದ ಎಲ್ಲ ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
14ನೇ ವಾರ್ಡ್‌ನಲ್ಲಿ ಶನಿವಾರ ನಗರೋತ್ಥಾನ ಯೋಜನೆಯಡಿ 96 ಲಕ್ಷ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದಿನ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಹೇಳಿಕೊಂಡರೆ ಗಮನಿಸುತ್ತಿರಲಿಲ್ಲ ಎಂದು ವಾರ್ಡ್‌ಗೆ ಭೇಟಿ ನೀಡಿದಾಗ ಜನರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಶಾಸಕನಾದ ನಂತ ಈವರೆಗೆ ನಗರದ 31 ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಂಡು ತುರ್ತು ಕಾಮಗಾರಿಗೆ ಹಣ ಒದಗಿಸಿದ್ದೇನೆ. ಪ್ರತಿ ವಾರ್ಡ್‌ಗೆ 1 ಕೋಟಿಯಿಂದ 2 ಕೋಟಿ ರೂ.ವರೆಗೆ ಅನುದಾನ ನೀಡಲಾಗಿದೆ. 14 ವಾರ್ಡ್‌ಗಳಿಗೆ 96 ಲಕ್ಷ ರೂ. ಜತೆ ಹೆಚ್ಚುವರಿಯಾಗಿ 40 ಲಕ್ಷ ರೂ. ನೀಡುತ್ತಿದ್ದು, ಸಮುದಾಯ ಭವನ ಅಭಿವೃದ್ಧಿಗೆ 28 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದರು.
ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, 14ನೇ ವಾರ್ಡ್‌ನಲ್ಲಿರುವ ಅಂಬೇಡ್ಕರ್ ಭವನ ಮರು ನಿರ್ಮಾಣಕ್ಕೆ 28 ಕೋಟಿ ರೂ. ಮೀಸಲಿಡಲಾಗಿದೆ. ಭವನವನ್ನು ಅಂಬೇಡ್ಕರ್ ಅಧ್ಯಯನ ಕೇಂದ್ರವಾಗಿಸುವ ಚಿಂತನೆ ನಡೆಸಲಾಗಿದೆ. ಅಂಬೇಡ್ಕರ್ ಬಗ್ಗೆ ಅರಿತುಕೊಳ್ಳುವವರಿಗೆ ಅಗತ್ಯ ಮಾಹಿತಿ ತಲುಪಿಸುವ ಕೇಂದ್ರ ಇದಾಗಲಿದೆ ಎಂದು ಹೇಳಿದರು. ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಲಲಿತಮ್ಮ, ಮಧುಮಾಲತಿ, ಸೈಯದ್ ಜಾಕೀರ್, ಉಮೇಶ್, ನಾಗರತ್ನಾ, ಸಬೀನಾ ತನ್ವೀರ್, ಮಹ್ಮದ್ ಖಾಸಿಂ, ನಾಗಭೂಷಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net