

ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕು ಶೈಕ್ಷಣಿಕವಾಗಿ ಹಿಂದುಳಿದಿದ್ದು ಪ್ರಗತಿಗೆ ಶ್ರಮಿಸುವೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು. ಕಾನಾಮಡುಗು ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು. ನಾನು ಶಾಸಕನಾದ ಬಳಿಕ ಹಳ್ಳಿಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಮೊದಲು ಶಾಲೆಯ ಸ್ಥಿತಿಗತಿ ಬಗ್ಗೆ ಮಹಿತಿ ಪಡೆಯುತ್ತಿದ್ದೇನೆ. ಈ ಮೂಲಕ ಅಗತ್ಯ ಅನುದಾನ ತಂದು ಶಾಲಾಕೊಠಡಿ ನಿಮಾರ್ಣ ಕಾಮಗಾರಿಗೆ ಅದ್ಯತೆ ನೀಡಿರುವೆ. ಒಟ್ಟು 31 ಕೊಠಡಿಗಳನ್ನು ನಿರ್ಮಿಸಲು 1.67 ಕೋಟಿ ರೂ. ತಂದಿರುವೆ. ಶಾಲೆಗಳಲ್ಲಿ ಅಗತ್ಯ ಕೊಠಡಿ ನಿರ್ಮಿಸಲು ಬದ್ಧವಾಗಿದ್ದೇನೆ. ತಾಲೂಕಿನ ಗೊಲ್ಲರಹಟ್ಟಿಗಳ ಅಭಿವೃದ್ಧಿಗಾಗಿ 3.50 ಕೋಟಿ ರೂ. ಬಿಡುಗಡೆಯಾಗಿದೆ. 18 ಗೊಲ್ಲರಹಟ್ಟಿಗಳಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ಮಾಡಿರುವುದಾಗಿ ಹೇಳಿದರು.
ಫೋಟೊ