ಭೋವಿ ಸಮುದಾಯದ ಮೂಲ ಸೌಕರ್ಯಕ್ಕೆ ಆದ್ಯತೆ

GAJENDRAGADA
Published on

ಗಜೇಂದ್ರಗಡ: ಭೋವಿ ಸಮುದಾಯಕ್ಕೆ ಮೂಲ ಸೌಕರ್ಯ ನೀಡುವ ಮೂಲಕ ಹಿರೇದುರ್ಗಾದೇವಿ ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಹಿರೇದುರ್ಗಾದೇವಿ ದೇವಸ್ಥಾನದ ಬಳಿ ಸೋಮವಾರ ಆಯೋಜಿಸಿದ್ದ ಸಿದ್ಧರಾಮೇಶ್ವರ ಭೋವಿ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ. ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಒದಗಿಸಲು 17 ಲಕ್ಷ ರೂ. ವೆಚ್ಚದ ಶೌಚಗೃಹ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎಸ್. ಸೋಂಪುರ ಮಾತನಾಡಿ, ದೇಶಕ್ಕೆ ಭೋವಿ ಸಮಾಜದ ಕೊಡುಗೆ ಅನನ್ಯವಾಗಿದೆ. ಜ.28 ರಂದು ವಡ್ಡರ ಯಲ್ಲಣ್ಣನ ಜಯಂತಿ ಆಚರಿಸುವ ಮೂಲಕ ಯುವ ಸಮೂಹದಲ್ಲಿ ದೇಶಪ್ರೇಮ ಹಾಗೂ ಯಲ್ಲಣ್ಣನ ಆದರ್ಶದ ಕುರಿತು ತಿಳಿಸಿಕೊಡಬೇಕಿದೆ’ ಎಂದರು.

ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ, ದೇಶ ಹಾಗೂ ರಾಜ್ಯದಲ್ಲಿನ ಬಹುಭಾಗ ಕಟ್ಟಡಗಳ ನಿರ್ಮಾಣವನ್ನು ನಾವು ಮಾಡಿದ್ದೇವೆ. ಶಿಕ್ಷಣಕ್ಕೆ ಆದ್ಯತೆ ನೀಡಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು.

ಸಮಾಜದ ಅಧ್ಯಕ್ಷ ಮಾರುತಿ ಕಲ್ಲೊಡ್ಡರ, ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ರಾಜು ಸಾಂಗ್ಲೀಕರ, ಮೂಕಪ್ಪ ಮುಧೋಳ, ಮಿಥುನ ಪಾಟೀಲ, ಬಸವರಾಜ ಬಂಕದ, ವಿ.ಬಿ. ಸೋಮನಕಟ್ಟಿಮಠ, ಲಾಲಪ್ಪ ರಾಠೋಡ, ದುರಗಪ್ಪ ಮುಧೋಳ, ಸುರೇಂದ್ರಸಾ ರಾಯಬಾಗಿ, ಲಕ್ಷ್ಮೀ ಮುಧೋಳ, ಷಣ್ಮುಖಪ್ಪ ಚಿಲಝರಿ, ಶರಣಪ್ಪ ಚಳಗೇರಿ, ಯಲ್ಲಪ್ಪ ಬಂಕದ, ಯಚ್ಚರಗೌಡ ಗೋವಿಂದಗೌಡ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net