

ಮುದ್ದೇಬಿಹಾಳ: ಕುಡಿಯುವ ನೀರಿನ ಮೂಲಗಳ ಶುದ್ಧತೆ, ಗುಣಮಟ್ಟ ಖಚಿತಪಡಿಸಿಕೊಳ್ಳಲು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಎ್ಟಿ ಕಿಟ್ (ಫೀಲ್ಡ್ ಟೆಸ್ಟಿಂಗ್ ಕಿಟ್) ನೀಡಲಾಗಿದೆ.
ವಾಟರ್ಮನ್ಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ (ಆರ್ಡಬ್ಲುಎಸ್) ಎಇಇ, ತಾಪಂ ಪ್ರಭಾರ ಇಒ ಆರ್.ಎಸ್.ಹಿರೇಗೌಡರ ಹೇಳಿದರು.
ಇಲ್ಲಿನ ತಾಪಂ ಸಭಾಭವನದಲ್ಲಿ ಜಿಲ್ಲಾ ಪ್ರಯೋಗಾಲಯ, ತಾಪಂ, ಆರ್ಡಬ್ಲುಎಸ್ ಸಂಯುಕ್ತ ಆಶ್ರಯಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಪಂಗಳ ನೀರಿನ ಮೂಲಗಳ ಗುಣಮಟ್ಟ ತಪಾಸಣೆ ಅಭಿಯಾನ, ವಾಟರ್ಮನ್ಗಳಿಗೆ ತರಬೇತಿ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಕಿಟ್ನ ಪರಿಣಾಮಕಾರಿ ಬಳಕೆಯಾದಲ್ಲಿ ಗ್ರಾಮೀಣ ಜನರಿಗೆ ಶುದ್ಧ ನೀರು ಕೊಡುವುದು ಸುಲಭವಾಗುತ್ತದೆ. ಈಗ ಮಳೆಗಾಲ ಪ್ರಾರಂಭವಾಗಿದ್ದು ನೀರಿನ ಮೂಲಗಳಲ್ಲಿ ಹೊಸ ನೀರು ಸೇರ್ಪಡೆಯಾಗಿರುತ್ತದೆ. ಅದರಲ್ಲಿ ಕಲ್ಮಶಗಳು ಇರುವ ಸಂಭವ ಇರುವುದರಿಂದ ಎ್ಟಿಕೆ ಬಳಸಿ ನೀರಿನ ಮಾದರಿ ಪರಿಶೀಲಿಸುವುದು ನೀರಿನ ಗುಣಮಟ್ಟವನ್ನು ಖಚಿತಪಡಿಸುತ್ತದೆ ಎಂದರು.
ಆರ್ಡಬ್ಲುಎಸ್ನ ಇಂಜಿನಿಯರ್ಗಳಾದ ಅನೀಲ ಸಜ್ಜನ, ಸಂದೀಪ ಹಳ್ಳೂರ, ಜಿಲ್ಲಾ ಪ್ರಯೋಗಾಲಯದ ತಂತ್ರ ಲಕ್ಷ$್ಮಣ ವಿಜಯಪುರ ಇನ್ನಿತರರು ಎಲ್ಲ ವಾಟರ್ಮನ್ಗಳಿಗೆ ನೀರಿನ ತಪಾಸಣೆಯನ್ನು ಎ್ಟಿಕೆ ಮೂಲಕ ಹೇಗೆ ಮಾಡಬೇಕು, ಹೇಗೆ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು ಎನ್ನುವುದರ ಪ್ರಾಯೋಗಿಕ ಮಾಹಿತಿ ನೀಡಿದರು.
ವಾಟರ್ಮನ್ಗಳಿಂದ ತಪಾಸಣೆ ಮಾಡಿಸಿ ಅವರಿಗೆ ತಪಾಸಣೆ ಮಾಡಲು ಬರುವುದನ್ನು ಖಚಿತಪಡಿಸಿಕೊಳ್ಳಲಾಯಿತು. ತಾಪಂ ಸಹಾಯಕ ನಿರ್ದೇಶಕ ಖೂಬಾಸಿಂಗ್ ಜಾಧವ್ ಹಾಗೂ ಎಲ್ಲ ಗ್ರಾಪಂಗಳ ವಾಟರ್ಮನ್ಗಳು ಇದ್ದರು. ಈ ಅಭಿಯಾನ ಮತ್ತು ತರಬೇತಿ ರಾಜ್ಯಾದ್ಯಂತ ಒಂದು ವಾರ ನಡೆಯಲಿದೆ ಎನ್ನುವ ಮಾಹಿತಿಯನ್ನು ಎಲ್ಲರಿಗೂ ತಿಳಿಸಿಕೊಡಲಾಯಿತು.