ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ

jkd 20-1 bhoomi
ಜಮಖಂಡಿ ನಗರದ ಆಯುರ್ವೇದಿಕ ಆಸ್ಪತ್ರೆಯ 20 ಲಕ್ಷ ರೂ. ಮೊತ್ತದ ಮೊದಲ ಮಹಡಿ ಕಟ್ಟಡದ ಭೂಮಿ ಪೂಜೆಯನ್ನು ಶಾಸಕ ಜಗದೀಶ ಗುಡಗುಂಟಿ ನೆರವೇರಿಸಿದರು. ಅಜಯ ಕಡಪಟ್ಟಿ, ಅರವಿಂದಗೌಡ ಪಾಟೀಲ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ವೈದ್ಯಾಧಿಕಾರಿ ಡಾ. ರಜಪೂತ, ಗುತ್ತಿಗೆದಾರ ಆರ್.ಬಿ. ಮಹಾಲಿಂಗಪುರ ಇತರರಿದ್ದರು.
Published on

ಜಮಖಂಡಿ: ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಚರ್ಚಿಸಿದಾಗ ನಗರ ಅಭಿವೃದ್ಧಿಗೆ 13.5 ಕೋಟಿ ರೂ. ಅನುಮೋದನೆ ನಿಡಲಾಗಿದೆ ಎಂದು ಸಚಿವರು ತಿಳಿಸಿದ್ದು, ಬಂದ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ನಗರದ ಆಯುರ್ವೇದಿಕ್ ಆಸ್ಪತ್ರೆಯ 20 ಲಕ್ಷ ರೂ. ಮೊತ್ತದ ಮೊದಲ ಮಹಡಿ ಕಟ್ಟಡದ ಭೂಮಿಪೂಜೆ, ಮೀನುಗಾರಿಕೆ ಇಲಾಖೆ ಆವರಣದಲ್ಲಿ 16 ಲಕ್ಷ ರೂ. ಮೊತ್ತದ ತರಬೇತಿ ಹಾಲ್‌ನ ಭೂಮಿಪೂಜೆ, ಬನಶಂಕರಿ ದೇವಸ್ಥಾನದ ಹತ್ತಿರ 2.5 ಲಕ್ಷ ರೂ. ಮೊತ್ತದ ಸಮುದಾಯ ಭವನದ ಭೂಮಿಪೂಜೆ ಹಾಗೂ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ 10 ಲಕ್ಷ ರೂ. ಮೊತ್ತದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ರಸ್ತೆ ನಿರ್ಮಾಣ, ಬೀದಿ ದೀಪ, ಕುಡಿಯುವ ನೀರು ಸೇರಿ ವಿವಿಧ ಮೂಲ ಸೌಕರ್ಯಕ್ಕಾಗಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುವಂತಾಗಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ನಗರಕ್ಕೆ ಹೊಂದಿಕೊಂಡಿರುವ 4 ಪುನರ್ವಸತಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.

ಅಜಯ ಕಡಪಟ್ಟಿ, ಅರವಿಂದಗೌಡ ಪಾಟೀಲ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ವೈದ್ಯಾಧಿಕಾರಿ ಡಾ. ರಜಪೂತ, ಗುತ್ತಿಗೆದಾರ ಆರ್.ಬಿ. ಮಹಾಲಿಂಗಪುರ, ಅಬ್ದುಲ್‌ರಜಾಕ್ ಮಸೊಡಗಿ, ಮೇತ್ರಿ, ರಮೇಶ ಆಲಬಾಳ, ರಾಜು ಚಿಕನಾಳ, ಚಂದ್ರಕಾಂತ ಮೋದಿ, ಗೀತಾ ಸೂರ್ಯವಂಶಿ, ಶ್ರೀಶೈಲ ಗಡಾದ, ಶ್ರೀಧರ ಕಂಬಿ, ವಿಶ್ವಾಸ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net