

ಹುಣಸೂರು : ಜೈವಿಕ ಇಂಧನ ಮೂಲಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕೆಂದು ಡೀಡ್ ಸಂಸ್ಥೆಯ ಸಂಯೋಜಕ ಪ್ರಕಾಶ್ ಒತ್ತಾಯಿಸಿದರು.
ಬೆಂಗಳೂರಿನ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಇತ್ತೀಚೆಗೆ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಲಕ್ಷ್ಮಣ ತೀರ್ಥ, ಕಾವೇರಿ, ಕಪಿಲ ಮುಂತಾದ ಪ್ರಮುಖ ನದಿಗಳು ಹರಿಯುತ್ತಿವೆ. ನದಿಗಳನ್ನು ಸ್ವಚ್ಛವಾಗಿಡುವ ಜತೆಗೆ ನದಿಗಳ ಉದ್ದಕ್ಕೂ ಜೈವಿಕ ಇಂಧನ ಮರಬೆಳೆಸಲು ಕ್ರಮವಹಿಸಲು ಹಾಗೂ ರೈತರ ಜಮೀನಿನ ಬದು, ಸಾರ್ವಜನಿಕ ಸ್ಥಳಗಳಾದ ರಸ್ತೆ ಬದಿ, ಶಾಲಾ ಕಾಲೇಜಿನ ಆವರಣ, ಸರ್ಕಾರಿ ಕಚೇರಿ ಆವರಣ, ಕೆರೆಕಟ್ಟೆಗಳು, ಕಾಲುವೆಗಳ ಏರಿ, ಗೋಮಾಳ ಹಾಗೂ ಹಾಳಾಗಿರುವ ಕಾಡುಗಳಲ್ಲಿ ಜೈವಿಕ ಮರಗಳನ್ನ ಬೆಳೆಸಲು ಕ್ರಮವಹಿಸುವಂತೆ ಯೋಜನೆ ರೂಪಿಸಲು ಒತ್ತಾಯಿಸಿದರು.
ಅಲ್ಲದೇ ಸೇವಾ ಸಂಸ್ಥೆಗಳು ಹಾಗೂ ಇಂಜಿನಿಯರಿಂಗ್ ಕಾಲೇಜ್‌ಗಳ ಜತೆಗಿನ ಈಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಜಾರಿಗೊಳಿಸಿ ಪರಿಸರ ರಕ್ಷಣೆ ಹಾಗೂ ಇಂಧನ ಸ್ವಾವಲಂಬನೆ ಸಾಧಿಸಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಜೈವಿಕ ಇಂಧನ ಅಭಿವದ್ಧಿ ಮಂಡಳಿ ಅಧ್ಯಕ್ಷ ಸುಧೀಂದ್ರ ಮಾತನಾಡಿ, ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಮತ್ತು ಯೋಜನೆ ಜಾರಿ ಕುರಿತು ಸರ್ಕಾರದ ಗಮನಸೆಳೆಯಲು ಕ್ರಮವಹಿಸಲಾಗುವುದು ಎಂದರು.
ಯೋಜನಾ ನಿರ್ದೇಶಕ ದೇವರಾಜೇಗೌಡ, ಚನ್ನಗಿರಿ ರೂಪಾ ನಾಯಕ್, ಬಿಜಾಪುರದ ಡಾ.ಬಾಬು ಸಜ್ಜನ್ ಮುಂತಾದ ಸೇವಾ ಸಂಸ್ಥೆಗಳ ಪ್ರಮುಖರು ಇದ್ದರು.
29ಊಓ1: ಬೆಂಗಳೂರಿನ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಆಯೋಜನೆಗೊಂಡಿದ್ ಸಭೆಯಲ್ಲಿ ಮಂಡಳಿ ಅಧ್ಯಕ್ಷ ಸುಧೀಂದ್ರ ಮಾತನಾಡಿದರು. ಯೋಜನಾ ನಿರ್ದೇಶಕ ದೇವರಾಜೇಗೌಡ, ಪ್ರಕಾಶ್, ರೂಪಾನಾಯಕ್ ಇತರರಿದ್ದಾರೆ.
ಉಪಸಂಪಾದಕರ ಗಮನಕ್ಕೆ; ಬಾಕಿ ಇರುವ ಸುದ್ದಿ
ಜೂ.28ರ 1ನೇ ಫೈಲಿನ ಪೊಲೀಸ್ ಇಲಾಖೆ ಸುದ್ದಿ