ಸ್ಮಶಾನದ ಸ್ವಚ್ಛತೆಗೂ ಆದ್ಯತೆ ನೀಡಿ

Prioritize the cleanliness of the cemetery as well.
ಲೋಕಾಪುರದ ಹೊರವಲಯದಲ್ಲಿರುವ ಹಿಂದೂ ಸ್ಮಶಾನ ಭೂಮಿಯನ್ನು ಸ್ವಚ್ಛಗೊಳಿಸುತ್ತಿರುವ ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು.
Published on

ಲೋಕಾಪುರ : ಪಟ್ಟಣದ ಹೊರವಲಯದ ಹಿಂದು ಸ್ಮಶಾನ ಭೂಮಿಯಲ್ಲಿ ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸ್ಮಶಾನ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾಜದ ಅಧ್ಯಕ್ಷ ಸದಾಶಿವ ನಾವ್ಹಿ ಮಾತನಾಡಿ, ಸಮಾಜದಲ್ಲಿ ಬೇರೂರಿವ ಮೂಢ ನಂಬಿಕೆಗಳನ್ನು ದೂರಾಗಿಸಲು ಜಾಗೃತಿ ಕಾರ್ಯಕ್ರಮಗಳು ಅವಶ್ಯವಾಗಿವೆ. ಸ್ಮಶಾನ ಒಂದು ಮಂದಿರ ಎಂಬ ಭಾವನೆ ಮೂಡಿದಾಗ ಮನುಷ್ಯನಲ್ಲಿ ಅಡಗಿರುವ ಭಯ ದೂರವಾಗುತ್ತದೆ. ಸ್ಮಶಾನದ ಸ್ವಚ್ಛತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆ ಎಂದರು.

ಹಡಪದ ಅಪ್ಪಣ್ಣ ಕ್ಷೇಮಾಭಿವೃದ್ಧಿ ಕಾರ್ಯದರ್ಶಿ ರವಿ ಹಡಪದ ಮಾತನಾಡಿ, ಬದುಕಿರುವ ಮನೆ ಸ್ವಚ್ಛವಾಗಿಟ್ಟುಕೊಳ್ಳುವ ನಾವು ಸತ್ತ ಮೇಲೆ ಹೋಗುವ ಪವಿತ್ರ ರುದ್ರಭೂಮಿಯನ್ನು ಅಸ್ವಚ್ಛಗೊಳಿಸುವುದು ಸರಿಯಲ್ಲ. ಭಯ ಮುಕ್ತ ವಾತಾವರಣದಿಂದ ಸ್ಮಶಾನದಲ್ಲೂ ವಾಯುವಿಹಾರ ಮಾಡುವಂತಾಗಬೇಕು. ಸಹ ಭೋಜನಗಳು ನಡೆಯಬೇಕು. ಇದರಿಂದ ಸಮಾಜದಲ್ಲಿ ಮೂಢನಂಬಿಕೆ ದೂರ ಮಾಡಲು ಸಾಧ್ಯವಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಚಂದ್ರಶೇಖರ ಸೊಲ್ಲಾಪುರ, ಕಾರ್ಯದರ್ಶಿ ರವಿ ಹಡಪದ, ಖಜಾಂಜಿ ಶಿವ ನಾವ್ಹಿ, ಮಂಜುನಾಥ ನಾವ್ಹಿ, ವಿಠ್ಠಲ ನಾವ್ಹಿ, ರಂಗಪ್ಪ ಹಡಪದ, ಪತ್ರೆಪ್ಪ ಹಡಪದ, ಕಿರಣ ಯರಗಟ್ಟಿ, ಕಾಶಿನಾಥ ನಾವ್ಹಿ, ಮಾಜಿ ಸೈನಿಕ ಸಿದ್ದಪ್ಪ ಹಡಪದ, ನಾಗರಾಜ ಸೊಲ್ಲಾಪುರ, ಅನೀಲ ನಾವ್ಹಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net