ತಂತ್ರಜ್ಞಾನ ಆಧಾರಿತ ಕಲಿಕೆಗೆ ಆದ್ಯತೆ ಕೊಡಿ

H25-DUSMA
Published on

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ಇಲ್ಲಿಯ ಕುಸುಗಲ್ ರಸ್ತೆಯ ವೇದಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಮಂಗಳವಾರ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ಪ್ರೋಗ್ರಾಮ್ ಏರ್ಪಡಿಸಲಾಗಿತ್ತು.

ಶಿಕ್ಷಣ ತಜ್ಞ ಮಹೇಶ ಮಾಶಾಳ ಅವರು 21ನೇ ಶತಮಾನದ ಮುಂದುವರಿದ ಶಿಕ್ಷಣ ಹಾಗೂ ಎಐ ಕಂಪ್ಯೂಟರ್ ಜ್ಞಾನದ ಕುರಿತು ತರಬೇತಿ ನೀಡಿ ಮಾತನಾಡಿ, ಶೈಕ್ಷಣಿಕ ಹಂತಗಳು ಬೇರೆ ಬೇರೆಯಾಗಿವೆ. ಮುಂಬರುವ ದಿನಗಳಲ್ಲಿ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಾಲಕರು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಬೆಳೆಯಲು ಪೂರಕವಾಗಲಿದೆ ಎಂದರು.

ಡಿಯುಎಸ್‌ಎಂಎ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪಾಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಹುಬ್ಬಳ್ಳಿಯ 40 ಶಾಲೆಗಳ ಮ್ಯಾನೇಜ್‌ಮೆಂಟ್‌ನವರು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ಪ್ರಮುಖರಾದ ಮಹೇಂದ್ರ ಸಿಂಘಿ, ಸುರೇಶ ಠಕ್ಕರ, ಗಿರೀಶ ಉಪಾಧ್ಯ, ಪಿ.ಎ. ಊಟವಾಲೆ, ವಿಶ್ವನಾಥ ರಾನಡೆ, ಜಿ.ವಿ. ವಳಸಂಗ, ಸಿದ್ದು ಗೌಡ, ನಿಖಿಲ್ ಹರ್ತಿ, ರಾಜಾ (ರಾಮಚಂದ್ರ) ದೇಸಾಯಿ, ಜಗದೀಶ ಕಲ್ಯಾಣಶೆಟ್ಟರ್, ಎಂ.ಕೆ. ಬಾಬಜಿ, ಸುವರ್ಣಲತಾ.ಎ., ಆರ್.ಟಿ. ತವನಪ್ಪನವರ, ವಿಮಲಾ ತಾಳಿಕೋಟಿ, ಜೆ.ಕೆ. ಶೆಟ್ಟಿ, ಎಸ್.ಕೆ. ಆದಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net