ಅಧ್ಯಯನಕ್ಕೆ ಆದ್ಯತೆ ಕೊಡಿ

Oplus_0
Oplus_0
Published on

ಹುಬ್ಬಳ್ಳಿ: ಸಮರ್ಥ ಪದವಿಪೂರ್ವ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವು ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಡಾ. ಅರವಿಂದ ಕರಬಸನಗೌಡ್ರ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಪೀಳಿಗೆ ಅಧ್ಯಯನಕ್ಕೆ ಆದ್ಯತೆ ಕೊಡಬೇಕು. ಜತೆಗೆ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಅಂದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ಆರ್.ಸಿ. ಹಲಗತ್ತಿ, ಚೇರ್ಮನ್ ಅಖಿಲಕುಮಾರ ಹಲಗತ್ತಿ, ಖಜಾಂಚಿಗಳಾದ ಜಯಂತ ಭಟ್, ಸುಮಿತ್ ಭಟ್, ಪ್ರಾಚಾರ್ಯ ಪ್ರೊ. ಮಿಥುನ್ ಶಿಂಧೆ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ರಾಜಶೇಖರ ಕಬಾಡಗಿ, ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನ ಜೋಶಿ, ಅಡ್ಮಿಷನ್ ಹೆಡ್ ಫರ್ಹಾನ್ ಖೋಜೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net