ಸಮಾಜ ಸಮಾನತೆಗೆ ಆದ್ಯತೆ ನೀಡಲಿ

1 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತದ ಕಾನೂನು ಸುವ್ಯವಸ್ಥೆಯಲ್ಲಿ ಮಹಿಳೆ ತನ್ನ ರಕ್ಷಣೆ ಮಾಡಿಕೊಳ್ಳಲು ಅಗತ್ಯವಾದ ಅಂಶಗಳು ಇವೆಯಾದರೂ ಸಮಾಜ ಸಹ ತನ್ನ ದೃಷ್ಟಿಕೋನವನ್ನು ಸಮಾನತೆಯತ್ತ ಹೊರಳಿಸಬೇಕಾಗಿದೆ ಎಂದು ನ್ಯಾಯವಾದಿ ಆಶಾ ಪ್ರಳಯಕಲ್ಮಠ ಹೇಳಿದರು.
ನಗರದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಕುಂತಲಾ ಗಂಗಾಧರಮಠ ಹಾಗೂ ಗೀತಾ ಕುಲಕರ್ಣಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾಕಾಶಿ ಧಾರವಾಡಕ್ಕೂ ಪಬ್​ ಸಂಸ್ಕೃತಿ ಕಾಲಿಡುತ್ತಿರುವುದು ಭಯ ಹುಟ್ಟಿಸುವ ಸಂಗತಿ ಎಂದರು.
ನಂತರ ಮಹಿಳೆಯ ಸುರಕ್ಷೆ ಆಕೆಯದೇ ಹೊಣೆ ಎನ್ನುವ ವಿಷಯದ ಪರ ಹಾಗೂ ವಿರೋಧವಾಗಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಚರ್ಚೆ ಮೂಲಕ ವ್ಯಕ್ತಪಡಿಸಿದರು. ಸಂಧ್ಯಾ ದೀಕ್ಷಿತ, ರೇಖಾ ಜೋಶಿ, ಸುಧಾ ಹುಲಗೂರ, ಕಸ್ತೂರಿ ಬೀರಪ್ಪನವರ, ಸುಧಾ ಕಬ್ಬೂರ, ಸುಲೋಚನಾ ಮಾಲೀಪಾಟಿಲ, ಅನ್ನಪೂರ್ಣ, ಪದ್ಮಜಾ ಉಮರ್ಜಿ, ರಾಧಾ ಶ್ಯಾಮರಾವ್​, ಮೇಘಾ ಹುಕ್ಕೇರಿ, ಸುಜಾತಾ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net