ಬ್ಯಾಂಕ್‌ಗಳಲ್ಲಿ ಭದ್ರತೆಗೆ ಆದ್ಯತೆ ನೀಡಿ

20bir 1
Published on

ಬೀರೂರು: ಬ್ಯಾಂಕ್‌ಗಳು ಗ್ರಾಹಕರ ಹಣ, ಆಭರಣ ಸೇರಿದಂತೆ ಇತರೆ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬೀರೂರು ಪಿಎಸ್‌ಐ ಜಿ.ಆರ್.ಸಜಿತ್‌ಕುಮಾರ್ ಹೇಳಿದರು.

ರಾಜ್ಯದ ವಿವಿಧ ಭಾಗಗಳ ಬ್ಯಾಂಕ್‌ಗಳಲ್ಲಿ ದರೋಡೆ ಹಾಗೂ ಕಳ್ಳತನಗಳ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ, ಕಾರ್ಪೋಷನ್ ಬ್ಯಾಂಕ್, ಬ್ಯಾಂಕ್ ಆ್ ಬರೋಡ, ಕೆನರಾ ಬ್ಯಾಂಕ್, ಡಿಸಿಸಿ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಿಗೆ ಭೇಟಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಅಪರಿಚಿತರು ಕೃತ್ಯ ನಡೆಸಲು ಮುಂದಾದರೆ ರಕ್ಷಣೆ ಹೇಗೆ ? ನಿಮ್ಮ ಮೇಲೆ ಹಲ್ಲೆ ನಡೆಸಿದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು.

ಬ್ಯಾಂಕ್‌ಗಳಲ್ಲಿ ಭದ್ರತೆ ನಂಬುವ ಸಾರ್ವಜನಿಕರು ನಗನಾಣ್ಯ, ಆಭರಣ ಇನ್ನಿತರೆ ಆಸ್ತಿಗಳನ್ನು ಬ್ಯಾಂಕ್‌ಗಳ ಲಾಕರ್‌ನಲ್ಲಿ ಇರಿಸಿರುತ್ತಾರೆ. ಅದರ ರಕ್ಷಣೆಯೂ ನಿಮ್ಮ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಬ್ಯಾಂಕ್‌ಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಸಿಸಿಟಿವಿ ನಿರಂತರವಾಗಿ ಚಾಲನೆಯಲ್ಲಿರ ಬೇಕು. ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಗಮನವಿಡ ಬೇಕು. ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನೇಮಕ ಹಾಗೂ ಎಟಿಎಂ ಯಂತ್ರಕ್ಕೆ ಹಣಸಂದಾಯ ಮಾಡಲು ಬರುವ ಏಜೆನ್ಸಿಗಳು ಗನ್‌ಮ್ಯಾನ್ ಜ ಬಂದು ಹಣ ಸಂದಾಯ ಮಾಡಬೇಕು. ಅಲ್ಲದೆ ಬ್ಯಾಂಕ್‌ಗಳಲ್ಲಿ ಎಮರ್ಜನ್ಸಿ ಸೈರನ್‌ಗಳನ್ನು ಅವಶ್ಯಕವಾಗಿ ಅಳವಡಿಸಿಕೊಳ್ಳಬೇಕು. ಹಣ ಪಡೆದು ಗ್ರಾಹಕರು ಹಣದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಬೇಕು ಎಂದು ಸಲಹೆ ನೀಡಿದರು.

ಭದ್ರತೆ ಬಗ್ಗೆ ನಿರ್ಲಕ್ಷೃ ತೋರಿದರೆ ಬ್ಯಾಂಕ್ ಅಧಿಕಾರಿಗಳ ಮೇಲೆ ಪ್ರಕರಣಗಳು ದಾಖಲಾಗುವ ಸಾಧ್ಯತೆ ಹೆಚ್ಚಿವೆ ಎಂದು ಸಲಹೆ ನೀಡಿದರು. ಪೊಲೀಸ್ ಕಾನ್‌ಸ್ಟೇಬಲ್ ಶಿವಕುಮಾರ್, ಆಂಜನಿ ಮತ್ತು ಶಾಖೆ ವ್ಯವಸ್ಥಾಪಕ ಹಾಗೂ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net