ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡಿ

Prioritize rural road improvements
ಕೆರೂರ ಸಮೀಪದ ಹಲಕುರ್ಕಿ ಗ್ರಾಮದಲ್ಲಿ ಅಂದಾಜು 6ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಜೆ. ಟಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಡಾ. ಎಂ. ಜಿ. ಕಿತ್ತಲಿ, ಗುತ್ತಿಗೆದಾರ ಬಿ. ಎನ್. ನಾಗನಗೌಡರ, ಡಾ.ಬಿ. ಕೆ. ಕೊವಳ್ಳಿ, ಮಂಜುನಾಥ ಮತ್ತಿಕಟ್ಟಿ ಇತರರಿದ್ದರು.
Published on

ಕೆರೂರ: ರಸ್ತೆಗಳು ಸುಧಾರಣೆಯಾದರೆ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಮತಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಹೆಚ್ಚಿನ ಅನುದಾನ ಒದಗಿಸಿ ರಸ್ತೆ ಸುಧಾರಣೆಗೆ ಆದ್ಯತೆ ನೀಡಲಾಗುವುದೆಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸಮೀಪದ ಹಲಕುರ್ಕಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹುನಗುಂದ ಉಪವಿಭಾಗದಿಂದ ಆಯೋಜಿಸಿದ್ದ ಅಂದಾಜು 6 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಎಲ್ಲ ಮೂಲ ಸೌಕರ್ಯಗಳು ದೊರಕಿದಾಗ ಗ್ರಾಮಗಳು ಅಭಿವೃದ್ಧಿ ಕಾಣುತ್ತವೆ ಎಂದು ತಿಳಿಸಿದರು. ಶೀಘ್ರ ಕಾಮಗಾರಿ ಆರಂಭಿಸಿ ಗುಣಮಟ್ಟದ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಜಿಪಂ ಮಾಜಿ ಸದಸ್ಯ ಡಾ. ಎಂ. ಜಿ. ಕಿತ್ತಲಿ ಮಾತನಾಡಿ, ಶಾಸಕರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜನಪರ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆದಾರ ಬಿ. ಎನ್. ನಾಗನಗೌಡರ, ಡಾ.ಬಿ. ಕೆ. ಕೊವಳ್ಳಿ, ಮಂಜುನಾಥ ಮತ್ತಿಕಟ್ಟಿ, ರವಿ ಲಮಾಣಿ, ಕಾರ್ಯನಿರ್ವಾಹಕ ಅಭಿಯಂತರ ಭೀಮಪ್ಪ ಬಿರಾದಾರ, ಅಭಿಯಂತರ ರಾಜು ಬಿರಾದಾರ ಹಾಗೂ ಹಲಕುರ್ಕಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net