ರಸ್ತೆ ಸ್ವಚ್ಛತೆಗೆ ಅದ್ಯತೆ ನೀಡಿ

FotoJet (1)
Published on

 ಅಧಿಕಾರಿಗಳಿಗೆ ಶಾಸಕ ಸಿ.ಬಿ.ಸುರೇಶ್​ಬಾಬು ಸೂಚನೆ

ಚಿಕ್ಕನಾಯಕನಹಳ್ಳಿ: ಪಟ್ಟಣದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಕುಡಿಯುವ ನೀರು, ರಸ್ತೆ ಸ್ವಚ್ಛತೆಗೆ ಅದ್ಯತೆ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಬಿ.ಸುರೇಶ್​ಬಾಬು ಸೂಚಿಸಿದರು.

ಪಟ್ಟಣದ ಪುರಸಭಾ ಕಚೇರಿಯ ಸಭಾಂಗಣದಲ್ಲಿ ಮಾಜಿ ಪುರಸಭಾ ಸದಸ್ಯರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದ ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯುಜಿಡಿ ಕಾಮಗಾರಿ ಹಾಗೂ ಕುಡಿಯುವ ನೀರಿನ ಯೊಜನೆಗಳು ಸಂಪೂರ್ಣವಾದ ಮೇಲೆ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಗಣಿಬಾದಿತ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ರಸ್ತೆಗಳ ದುರಸ್ಥಿ ಕಾರ್ಯ ನಡೆಯುತ್ತದೆ, ಅದರಂತೆ ಪಟ್ಟಣದ ಕೆರೆಗೆ ಈ ಕುಡಿಯುವ ನೀರಿನ 74 ಕೋಟಿ ರೂ. ವೆಚ್ಚದ ಯೋಜನೆಯಡಿಯಲ್ಲಿ ಸಿಂಥೇಟಿಕ್​ ಲೆಯರ್​ ಮೂಲಕ ನೀರನ್ನು ಶೇಖರಿಸುವ ಕೆಲಸ ಮಾಡಲಾಗುವುದು. ಇನ್ನು ಹೇಮಾವತಿ ಕುಡಿಯುವ ನೀರಿನ ಯೋಜನೆಯ ಈ ಭಾಗದ ದಬ್ಬೇಘಟ್ಟ, ಚಿಕ್ಕನಾಯಕನಹಳ್ಳಿ, ನಾಗತಿಕೆರೆ, ಕಂದಿಕೆರೆ ಕೆರೆಗಳಿಗೆ ಹರಿಸುವ ಕಾರ್ಯಕ್ಕೆ ಈಗಾಗಲೇ ಭೂಸ್ವಾದಿನ ಪ್ರಕ್ರಿಯೆ ಕಾರ್ಯ ನಡೆಯುತ್ತಿದ್ದು, ಅದಕ್ಕಾಗಿ 15 ಕೋಟಿ ಹಣ ರೂ. ಮೀಸಲಾಗಿದ್ದು, ರೈತರಿಗೆ ಭೂ ಪರಿಹಾರ ನೀಡಿ ಇನ್ನು ಮೂರನಾಲ್ಕು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ಮುಂದಿನ ವರ್ಷ ನೀರನ್ನು ಹರಿಸುವಂತಹ ಕೆಲಸ ಮಾಡಲಾಗುತ್ತದೆ ಎಂದರು.

ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಯುಜಿಡಿಯಿಂದಾಗಿ ರಸ್ತೆಗಳ ಹಾಳಾಗಿವೆ, ಪಟ್ಟಣದ ಕೆರೆ ಹೇಮಾವತಿ ನೀರು ಹರಿಸುವ ಯೋಜನೆಯ ಬಗ್ಗೆ, ಕೆಎಸ್​ಆರ್​ಟಿಸಿ ಡಿಪೋ ಪ್ರಾರಂಭವಾಗಿಲ್ಲ ಇನ್ನು ಖಾಲಿ ನಿವೇಶನಗಳಲ್ಲಿ ಗಿಡಗಳು ಬೆಳೆದಿದ್ದು, ಜನರಿಗೆ ತೊಂದರೆಯಾಗುತ್ತಿದೆ ಹಾಗೂ ಗಾಂಧಿ ಶಿಶುವಿಹಾರ ಬಿಳುವ ಸ್ಥೀತಿಯಲ್ಲಿದ್ದು ಅದನ್ನು ಕೆಡವಿ ನೂತನ ಅಂಗನವಾಡಿ ನಿರ್ಮಿಸಬೇಕೆಂದು ಮನವಿ ಮಾಡಿದರು.

ತಹಸೀಲ್ದಾರ್​ ಪುರಂಧರ, ಮುಖ್ಯಾಧಿಕಾರಿ ಮಂಜಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್​, ಪುರಸಭಾ ಮಾಜಿ ಸದಸ್ಯರ ಸಂಘದ ಅಧ್ಯಕ್ಷ ರೇಣುಕಮೂರ್ತಿ, ಸದಸ್ಯರಾದ ರೇಣುಕಾಗುರುಮೂರ್ತಿ, ಪೂರ್ಣಿಮ, ಮಲ್ಲೇಶಯ್ಯ, ತಿಪ್ಪೇಸ್ವಾಮಿ, ಲಕ್ಷಿ$್ಮಪಾಂಡುರಂಗಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net