ಗುಣಮಟ್ಟಕ್ಕೆ ಆದ್ಯತೆ ನೀಡಿ

FotoJet
Published on

ತಿಪಟೂರು: ನಗರದ ಹಾಸನ ರಸ್ತೆ ಬಳಿ 5 ಕೋಟಿ ರೂ. ವೆಚ್ಚದ ನೂತನವಾಗಿ ನಿರ್ಮಾಣವಾಗುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 18 ಕೊಠಡಿಯ 34 ಶೌಚಗೃಹ ಮತ್ತು ಸ್ನಾನ ಗೃಹವುಳ್ಳ ಮೆಟ್ರಿಕ್​ ನಂತರದ ಬಾಲಕರ ವಿದ್ಯಾರ್ಥಿನಿಲಯದ ಕಾಮಗಾರಿಯನ್ನು ಶಾಸಕ ಕೆ.ಷಡಕ್ಷರಿ ವೀಸಿದರು.

ನಂತರ ಅಲ್ಪಸಂಖ್ಯಾತರ ಮೆಟ್ರಿಕ್​ ನಂತರದ ಬಾಲಕರ ವಿದ್ಯಾರ್ಥಿನಿಲಯದ 14 ಕೊಠಡಿಗಳ ಕಾಮಗಾರಿ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗುತ್ತಿರುವ 36 ಕೊಠಡಿಗಳ ಬಾಲಕರ ವಸತಿಗೃಹದ ಕಟ್ಟಡ ಕಾಮಗಾರಿ ವೀಸಿ ಗುಣಮಟ್ಟ ಪರಿಶೀಲಿಸಿದರು.

ನೊಣವಿನಕೆರೆ ಹೋಬಳಿಯ ಹುಲ್ಲೇನಹಳ್ಳಿ ಕಾವಲ್​ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್​ ನಂತರದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದ ಕಾಮಗಾರಿ ವೀಕ್ಷಣೆ ಮಾಡಿ ನಂತರ ಶಿಕ್ಷಕರ ಅತಿಥಿಗೃಹಗಳನ್ನು ಕಾಮಗಾರಿಯನ್ನು ಪರೀಶೀಲಿಸಿ ಇಲಾಖಾ ಅಧಿಕಾರಿಗಳ ಜತೆ ಸಭೆ ನಡೆಸಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್​, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಕರ್ನಾಟಕ ಹೌಸಿಂಗ್​ ಬೋರ್ಡ್​ ಇಲಾಖೆಯ ಇಂಜಿನಿಯರ್​ ಜ್ಯೋತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತ್ರಿವೇಣಿ, ಅಲ್ಪಸಂಖ್ಯಾತರ ಅಧಿಕಾರಿ ಮಹಬೂಬ್​, ಭೂಮಾಪನ ಅಧಿಕಾರಿ ಪವನ್​ಕುಮಾರ್​, ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net