ಪ್ರಾಯೋಗಿಕ ತರಬೇತಿಗೆ ಆದ್ಯತೆ ನೀಡಿ

IMG20251009202151.jpg
Published on

ಧಾರವಾಡ: ವಿದ್ಯಾರ್ಥಿಗಳು ಕೇವಲ ಪುಸ್ತಕಗಳ ಹುಳವಾಗದೇ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಇಂದಿನ ಔದ್ಯೋಗಿಕ ಕಾರ್ಖಾನೆಗಳಲ್ಲಿ ಅವರಿಗೆ ಹೆಚ್ಚಿನ ಮಹತ್ವ ಸಿಗುತ್ತದೆ ಎಂದು ಉದ್ಯಮಿ ನಾಗರಾಜ ಯಲಿಗಾರ ಹೇಳಿದರು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ 2025ನೇ ಸಾಲಿನ ಪದವಿ ಪ್ರದಾನ ಮತ್ತು ಕಿರಿಯ ತರಬೇತುದಾರರಿಗೆ ಸ್ವಾಗತ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಇಂದಿನ ಆದುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮನ್ನು ತಾವು ಶೈಕ್ಷಣಿಕವಾಗಿ ಉನ್ನತೀಕರಣಗೊಳಿಸಿಕೊಳ್ಳಬೇಕು. ಕೈಗಾರಿಕೆಗಳಲ್ಲಿ ಐ.ಟಿ.ಐ. ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.

ಮತ್ತೋರ್ವ ಅತಿಥಿ ರವೀಂದ್ರ ಮುತ್ತಾಳ ಅವರು ತಮ್ಮ ತಾಯಿಯ ಹೆಸರಿನಲ್ಲಿ ಇಟ್ಟಿದ್ದ ಶಿಷ್ಯವೇತನವನ್ನು ಇಂಜಿನಿಯರಿಂಗ್‌ನ ನಾಲ್ಕು ವಿದ್ಯಾರ್ಥಿಗಳಿಗೆ ವಿತರಿಸಿದರು. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯು ಬಡಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಸದಸ್ಯ ಬಸವರಾಜ ತಾಳಿಕೋಟಿ ಮಾತನಾಡಿ, ತಂದೆ-ತಾಯಿ ಭರವಸೆಯನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಲು ಹಗಲು-ರಾತ್ರಿ ಪ್ರಯತ್ನಿಸಬೇಕು ಎಂದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಎಂ.ಅಗಡಿ, ಪ್ರಾಚಾರ್ಯ ಎಸ್.ಎಂ.ಬಮ್ಮನಗೌಡರ ವೇದಿಕೆಯಲ್ಲಿದ್ದರು. 2025ರಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಾವಿತ್ರಿ ಪಾಟೀಲ, ಮಂಜುಳಾ ಪುರದಣ್ಣವರ, ಕವಿತಾ ಪಾಟೀಲ, ಸ್ನೇಹಾ ವಾಲಗಳ್ಳಿ, ಪ್ರಭಾವತಿ ದಾಸರ, ಸಿದ್ದನಗೌಡ ಪಾಟೀಲ, ಮಾಂತೇಶ ಮೂಲ್ಕಿಪಾಟೀಲ, ಎಲ್.ಕೆ.ಪಾಟೀಲ, ಕಿರಣ ಬಣಕಾರ, ಸೋಮಶೇಖರ ಕರಡಿಗುಡ್ಡ, ಮಹಾಂತೇಶ ಕ್ವಾಟಿ, ರಾಘವೇಂದ್ರ ಗುಡೆಣ್ಣವರ, ಮೃತ್ಯುಂಜಯ ಅಮರಗೋಳ, ನಿಂಗಮ್ಮ ಹೆಬ್ಬಳ್ಳಿ, ಪ್ರವೀಣ ಬಡಿಗೇರ ಇತರರಿದ್ದರು. ಸಿದ್ದನಗೌಡ ಪಾಟೀಲ ನಿರೂಪಿಸಿದರು. ಜಿ.ಆರ್.ಕೊಡ್ಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net