

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನಸಿಕ ಕಾಯಿಲೆಗಳ ಬಗ್ಗೆ ಮನೋ ವೈದ್ಯರೊಂದಿಗೆ ಚಚಿರ್ಸಿ ಸಂದೇಹ ಪರಿಹರಿಸಿಕೊಳ್ಳಬೇಕು. ಜನರು ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಒಳ್ಳೆಯ ಹವ್ಯಾಸ ಅನುಸರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.
ವಿಶ್ವ ಸ್ಕಿಜೋ್ರೆನಿಯಾ ದಿನ ನಿಮಿತ್ತ ನಗರದ ಡಿಮ್ಹಾನ್ಸ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂ, ಜಿಲ್ಲಾಡಳಿತ ಮತ್ತು ಜಿಪಂ , ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕಿಜೋ್ರೇನಿಯಾ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಬಾರದು. ಮನೋವೈದ್ಯರ ಮಾರ್ಗದರ್ಶವನ್ನು ಸರಿಯಾದ ಸಂದರ್ಭದಲ್ಲಿ ಪಡೆದುಕೊಂಡು ಬೇಕಾದ ರೋಗಿಗಳಿಗೆ ಮನೋ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಸ್ಕಿಜೊ್ರೇನಿಯಾ ಕಾಯಿಲೆ ಬಗ್ಗೆ ಅರ್ಥಮಾಡಿಕೊಂಡು ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ದೊರಕುವಲ್ಲಿ ನೆರವಾಗಬೇಕು. ಎಲ್ಲರೂ ಸೇರಿ ಕೆಲಸ ಮಾಡಿದಾಗ ಸಮುದಾಯದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ನೀಡಲು ಸಾಧ್ಯ ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಡಿ.ಆರ್.ರೇಣಕೆ ಮಾತನಾಡಿ, ವಿಶ್ವ ಸ್ಕಿಜೋ್ರೆನಿಯಾ ಮಾನಸಿಕ ಕಾಯಿಲೆ. ಸುಮಾರು 300 ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಗುಣವಾಗುವುದು ವಿರಳ ಎಂದು ಅವರು, ಮಾನಸಿಕ ಆರೋಗ್ಯ ಕಾಳಜಿ ಕಾಯಿದೆ 2017ರ ಮಾಹಿತಿ ನೀಡಿದರು.
ಡಾ. ಎಸ್.ಎನ್.ಹೆಗಡೆ ಮಾತನಾಡಿದರು. ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಚಿತ್ತರಗಿ, ಜಿಲ್ಲಾ ಸಮೀಣಾಧಿಕಾರಿ ಡಾ. ಪರಶುರಾಮ ಎ್ ಕೆ., ಡಾ. ಮಂಜುನಾಥ, ಡಾ. ರವೀಂದ್ರ ಬೊವೇರ, ಡಾ. ತನುಜಾ ಕೆ.ಎನ್., ಜಿಲ್ಲಾ ವಕೀಲರ ಸಂ ಅಧ್ಯ ಅಶೋಕ ಏಣಗಿ, ಮನೋ ವೈದ್ಯ ತ ಡಾ.ಆದಿತ್ಯ ಪಾಂಡುರಂಗಿ, ಡಾ. ಸ್ವಪ್ನ ಪಾಂಡುರಂಗಿ, ಡಾ.ರಂಗನಾಥ, ಡಾ. ಮಂಜುನಾಥ ಭಜಂತ್ರಿ, ಇತರರು ಇದ್ದರು.
ಹನುಮಂತ ಎಂ. ಸ್ವಾಗತಿಸಿದರು. ಡಾ. ಸುನಂದಾ ಜಿ.ಟಿ ನಿರೂಪಿಸಿದರು. ಡಾ. ಅಶೋಕ ಕೋರಿ ವಂದಿಸಿದರು.