

ಹೊಸದುರ್ಗ: ಪ್ರತಿವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ಮಾತ್ರ ಸ್ವಚ್ಛತೆ ಮಾಡೋದು ಸರಿಯಲ್ಲ, ಬದಲಾಗಿ ಸ್ವಚ್ಛತೆ ಪ್ರತಿಕ್ಷಣವೂ ಆಗಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಾಣೇಹಳ್ಳಿಯ ತರಳಬಾಳು ಶಾಖಾಮಠದಲ್ಲಿ ಭಾನುವಾರ ಆಯೋಜಿದ್ದ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಹಿರಂಗದಲ್ಲಿ ಮಾತ್ರವಲ್ಲದೆ ಅಂತರಂಗದಲ್ಲಿಯೂ ಸ್ವಚ್ಛತೆ ಅಳವಡಿಸಿಕೊಂಡರೆ ಗಾಂಧೀಜಿ ಜಯಂತಿ ಆಚರಣೆಗೆ ಅರ್ಥ ಇರುತ್ತದೆ ಎಂದರು.