

ಕಳಸ: ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಮಾದಕ ವಸ್ತುಗಳು ಹಾಗೂ ಇನ್ನಿತರ ವಿಚಾರಗಳಿಂದ ನಶಿಸಿ ಹೋಗುತ್ತಿದೆ ಎಂದು ಜನಜಾಗೃತಿ ವೇದಿಕೆ ಸ್ಥಾಸಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.
ಸಂಸೆ ಮಂಜುನಾಥೇಶ್ವರ ಐಟಿಐ ಸಂಸ್ಥೆಯಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಾಲೇಜಿನ ಮಕ್ಕಳಿಗೆ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇಶ ಮಾನವ ಸಂಪನ್ಮೂಲ ಕಳೆದು ಕೊಂಡರೆ ದೇಶ ಬಡವಾಗುತ್ತದೆ ಮತ್ತು ದುರ್ಬಲವಾಗುತ್ತದೆ. ಆದರೆ ಮಾನವ ಸಂಪನ್ಮೂಲ ಖಾತೆ ಇದರ ಬಗ್ಗೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಕೈಗೊಳ್ಳದಿರುವುದು ವಿಷಾದನೀಯ. ಈ ಕೂಡಲೇ ಮಾನವ ಸಂಪನ್ಮೂಲ ಉಳಿಸಲು ದೇಶದಲ್ಲಿ ಮಾದಕ ವಸ್ತುಗಳನ್ನ ದೇಶದಲ್ಲಿ ನಿಷೇಧಿಸಬೇಕು ಎಂದರು.
ಮುಖ್ಯಶಿಕ್ಷಕ ಸತೀಶ್ ಮಾತನಾಡಿ, ಚೈನಾ ಹಾಗೂ ಪಾಕಿಸ್ತಾನದಂತಹ ವಿರೋಧಿ ದೇಶಗಳು ದೇಶದ ಒಳಗಡೆ ಯುವಕರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ ಎಂದು ಹೇಳಿದರು. ಗ್ರಾಮದ ಪ್ರಮುಖರಾದ ಸುದರ್ಶನ್, ಯೋಜನಾಧಿಕಾರಿ ಸುರೇಶ್, ಜನಜಾಗೃತಿ ವೇದಿಕೆ ಸದಸ್ಯೆ ಸುಜಯ ಸದಾನಂದ, ಬಿ.ಕೆ.ಮಹೇಶ್, ಕೀರ್ತಿಜೈನ್ ಇತರರಿದ್ದರು.