ಹು-ಧಾ ನಗರ ಸ್ವಚ್ಛತೆಗೆ ಆದ್ಯತೆ ಕೊಡಿ

tenginakayi
Published on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನಿವಾಸಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾದರಿ ನಗರವಾಗಿಸುವ ನನ್ನ ಸಂಕಲ್ಪದಲ್ಲಿ ನಿಮ್ಮ ಪಾತ್ರವೂ ಇದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಗೋಕುಲ ರಸ್ತೆ ಶ್ರೇಯ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ನಿವಾಸಿಗಳ ಸಮ್ಮಿಲನ, ಪ್ರತಿಭಾ ಪುರಸ್ಕಾರ, ನೂತನ ಶಾಸಕರು ಮತ್ತು ಮಹಾಪೌರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶ್ರೇಯಾ ಪಾರ್ಕ್ ಬಡಾವಣೆಯ ಕುಂದು-ಕೊರತೆಗಳನ್ನು ಅನುದಾನ ಲಭ್ಯತೆ ಆಧರಿಸಿ, ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಪೌರ ವೀಣಾ ಬರದ್ವಾಡ, ಕಾಲನಿಯ ಕುಂದು-ಕೊರತೆಗಳನ್ನು ನಿವಾರಿಸುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಲಿಂಗರಾಜ ಧಾರವಾಡಶೆಟ್ಟರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಕುಂದ ರಾಯಬಾಗಿ, ರಮೇಶ ರಂಗರೇಜ, ಅರುಣ ಕುಲಕರ್ಣಿ, ಡಿ.ಜಿ. ಕುಲಕರ್ಣಿ, ಎಸ್.ಎಸ್. ಜಾಧವ, ವಿಠ್ಠಲ ಕುಲಕರ್ಣಿ, ಜಿ.ವೈ. ಕೆಂಭಾವಿ ಇತರರು ಇದ್ದರು. ಹಾಲಸ್ವಾಮಿ ಕಂಪ್ಲಿಮಠ ಸ್ವಾಗತಿಸಿದರು. ತುಳಸಾ ರಾಯಬಾಗಿ ನಿರೂಪಿಸಿದರು. ಗುರುರಾಜ ಕೆ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net