ಆರೋಗ್ಯಕರ ಜೀವನಕ್ಕೆ ಆದ್ಯತೆ ನೀಡಿ

2 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧೂಮಪಾನ ತ್ಯಜಿಸುವ ಮೂಲಕ ನಾವು ಮತ್ತು ನಮ್ಮ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಮತ್ತು ಸಂತೋಷದ ಜಗತ್ತು ಸೃಷ್ಟಿಸಬಹುದು ಎಂದು ಐಎಂಎ ಧಾರವಾಡ ಶಾಖೆ ಅಧ್ಯ ಡಾ. ಸತೀಶ್​ ಇರಕಲ್​ ಹೇಳಿದರು.
ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಭಾರತೀಯ ವೈದ್ಯಕಿಯ ಸಂ, ಹು&ಧಾ ಮಹಾನಗರ ಪಾಲಿಕೆ ಮತ್ತು ಎಸ್​ಡಿಎಂ ದಂತ ಆಸ್ಪತ್ರೆ ವತಿಯಿಂದ ಶನಿವಾರ ಆಯೋಜಿಸಿದ್ದ ತಂಬಾಕು ಉದ್ಯಮದ ಹಸ್ತೇಪದಿಂದ ಮಕ್ಕಳನ್ನು ರಸುವ ವಿಷಯದೊಂದಿಗೆ ಜಾಗೃತಿ ಜಾಥಾ ಮತ್ತು ಆರೋಗ್ಯ ತಪಾಸಣೆ ಮತ್ತು ಕ್ಯಾನ್ಸರ್​ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಕೃಷ್ಣಿ ಶಿರೂರ, ಡಾ. ವಾಣಿ ಇರಕಲ್​, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಮಾತನಾಡಿದರು. ಡಾ.ಕಿರಣ ಕುಲಕಣಿರ್, ವಲಯ ಸಹಾಯಕ ಆಯುಕ್ತರಾದ ಶಂಕರ ಪಾಟೀಲ, ಸಂತೋಷ ಯರಂಗಳಿ, ಪ್ರಹ್ಲಾದ ರೆಡ್ಡಿ, ಆನಂದ ಕಾಂಬಳೆ, ಹಿರಿಯ ದಂತ ವೈದ್ಯೆ ಡಾ. ಪ್ರೀತಾ ಜೆ ಶೆಟ್ಟಿ, ಡಾ.ಯು.ಎಸ್​ ದಿನೇಶ, ಶಿವಯೋಗಿ ಅಮ್ಮಿನಗಡ, ಶ್ರೀಯಾ ಕಾಲೇಜಿನ ಡಾ. ವಾಣಿ ಇರಕಲ್​, ಡಾ. ರೋಡಾ ಜೇಸುರಾಜ್​, ಶ್ರೀಯಾ ಕಾಲೇಜಿನ ವಿದ್ಯಾಥಿರ್ಗಳು, ಇತರರು ಇದ್ದರು.
ಕಲಾಭವನದಿಂದ ಆರಂಭವಾದ ಜಾಗೃತಿ ಜಾಥಾ ಹಳೇ ಬಸ್​ ನಿಲ್ದಾಣ, ಮಾರುಕಟ್ಟೆ ಮಾರ್ಗವಾಗಿ ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿತು. ನಂತರ ನಡೆದ ಉಚಿತ ತಪಾಸಣಾ ಶಿಬಿರದಲ್ಲಿ ಡಾ. ಸತೀಶ್​ ಇರಕಲ್​, ಡಾ.ವಾಣಿ ಇರಕಲ್​, ಡಾ. ಪ್ರಕಾಶ ರಾಮನಗೌಡರ್​, ಡಾ.ನೀಲಕಂಠ ಪಾಟೀಲ, ಡಾ.ವಿಜಯ ನಾಡಕಣಿರ್, ಡಾ. ರಾಧಿಕಾ ಅಂಬೇಡ್ಕರ, ಡಾ. ಜ್ಯೋತಿ ಹಿರೇಮಠ, ಡಾ. ಅಚ್ಯುತ, ಡಾ.ಗಿರೀಶ ನಾಡಿಗೇರ, ಡಾ ಯು.ಎಸ್​ ದಿನೇಶ್​ ಸೇರಿ ನುರಿತ ವೈದ್ಯರ ತಂಡ ಮಹಾನಗರ ಪಾಲಿಕೆ ಪೌರಕಾಮಿರ್ಕರು, ಆಟೋ ಚಾಲಕರು ಸೇರಿ 300 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net