ಆರೋಗ್ಯ ಸಂಪತ್ತಿಗೆ ಆದ್ಯತೆ ನೀಡಿ

sdp haslar
Published on

ಸಿದ್ದಾಪುರ: ಹುಟ್ಟಿದ ಸಮಾಜವನ್ನು ಬೆಳೆಸುವುದು ಆ ಸಮುದಾಯದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಸಂಪತ್ತಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಕಾನಳ್ಳಿಯ ಸಭಾಭವನದಲ್ಲಿ ಬುಧವಾರ ಉತ್ತರ ಕನ್ನಡ ಜಿಲ್ಲಾ ಹಸ್ಲರ್ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಸಮಾಜದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಮುಂಚೂಣಿಗೆ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕೊಡಿಸಬೇಕು. ಹಸ್ಲರ್ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಕೀಳರಿಮೆಯಿಂದ ಮೊದಲು ಹೊರಬರಬೇಕು ಎಂದರು.

ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ಹಸ್ಲರ್ ಜನಾಂಗ ದೈಹಿಕ ಶ್ರಮದಲ್ಲಿ ಕಡಿಮೆಯಿಲ್ಲ. ಆದರೆ, ಮಾನಸಿಕವಾಗಿ ಮುಂದೆ ಬರಬೇಕಿದೆ. ಹಸ್ಲರ್ ಜನಾಂಗ ಪುರಾಣದ ನಂಟನ್ನು ಹೊಂದಿದೆ. ನಮ್ಮ ಇಚ್ಛಾಶಕ್ತಿ ಬಲಪಡಿಸಿಕೊಂಡು ಸಮಾಜದಲ್ಲಿ ಮುನ್ನೆಲೆಗೆ ಬರಬೇಕು ಎಂದರು.

ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕನ್ನಾ ಹಸ್ಲರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶ್ರೀಪಾದ ಹೆಗಡೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಸಿ.ಆರ್.ನಾಯ್ಕ, ವಿ.ಎನ್.ನಾಯ್ಕ, ಕಂಚಿಕೈ ಶನೇಶ್ವರ ಕ್ಷೇತ್ರದ ಧರ್ಮದರ್ಶಿ ಪುಟ್ಟಪ್ಪ, ಕಾನಳ್ಳಿ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಭಾಸ್ಕರ್ ಸಿ ಕಾನಳ್ಳಿ, ಸಂಘದ ಗೌರವಾಧ್ಯಕ್ಷ ವೆಂಕಟರಮಣ ಹಸ್ಲರ್, ಬೇಡ್ಕಣಿ ಗ್ರಾಪಂ ಸದಸ್ಯೆ ವಾಸಂತಿ ಹಸ್ಲರ್, ಡಿಎಸ್‌ಎಸ್ ಅಧ್ಯಕ್ಷ ಅಣ್ಣಪ್ಪ ಹಸ್ಲರ್, ಗೋಪಾಲ ಬಿ.ಎಸ್. ಉಪಸ್ಥಿತರಿದ್ದರು. ಚಂದ್ರಹಾಸ ಹೂವಿನಮನೆ ಸ್ವಾಗತಿಸಿದರು. ಕೊಲಸಿರ್ಸಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಗೋಪಾಲ ಕಾನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net