ನೇತ್ರ ರಕ್ಷಣೆಗೆ ಆದ್ಯತೆ ಕೊಡಿ

sri sri dd
ತೋರಣಗದ್ದೆಯಲ್ಲಿ ನೇತ್ರ ತಪಾಸಣಾ ಶಿಬಿರವನ್ನು ಡಾ. ವಿಷ್ಣುಪ್ರಸಾದ್,ಮೂರ್ತಿಶೆಟ್ಟಿ, ಮಹೇಶ್ ಉದ್ಘಾಟಿಸಿದರು. ಸುಮಾ, ವಿನುತಾ, ಸುನೀತಾ, ದಿಶಾ ಇದ್ದರು.
Published on

ಶೃಂಗೇರಿ: ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಪ್ರಮುಖ ಸ್ಥಾನವಿದೆ. ಪರಿಸರದ ಸುತ್ತಮುತ್ತಲಿನ ಸೌಂದರ್ಯ ತುಂಬಿಸಿಕೊಂಡು ಮನಸ್ಸಿಗೆ ಮುದನೀಡುವ ಕಣ್ಣಿನ ಆರೋಗ್ಯಕ್ಕೆ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಉಡುಪಿ ಪ್ರಸಾದ್ ನೇತ್ರಾಲಯದ ಡಾ. ವಿಷ್ಣುಪ್ರಸಾದ್ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸೋಮವಾರ ಶೃಂಗೇರಿ ವಲಯದ ತೋರಣಗದ್ದೆ ಜ್ಞಾನವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ದೃಷ್ಟಿ ದೋಷ ನಿವಾರಿಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಸಣಾ ಶಿಬಿರ ಏರ್ಪಡಿಸಿದಾಗ ಮಾತ್ರ ಆರೋಗ್ಯದ ಕುರಿತು ಜಾಗೃತಿ ಮೂಡಲು ಸಾಧ್ಯ ಎಂದರು.
ತಾಲೂಕು ಯೋಜನಾಧಿಕಾರಿ ಮೂರ್ತಿಶೆಟ್ಟಿ ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮ ಸಾಮಾಜಿಕ ಕಾಳಜಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಅರಿವು ಮೂಡಿಸಿ ಉಚಿತ ಚಿಕಿತ್ಸೆ ಹಾಗೂ ನೆರವು ನೀಡುವುದು ಸಂಸ್ಥೆ ಮೂಲ ಉದ್ದೇಶ ಎಂದರು.
ಮರ್ಕಲ್ ಗ್ರಾಪಂ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಸುಮಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ವಿನಯ್, ವಲಯ ಮೇಲ್ವಿಚಾರಕ ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net