ಕಣ್ಣಿನ ಆರೋಗ್ಯಕ್ಕೆ ಆದ್ಯತೆ ನೀಡಿ

08TKE 2(1)
Published on

ತರೀಕೆರೆ: ದೇಹದ ಎಲ್ಲ ಅಂಗಗಳಂತೆ ಕಣ್ಣಿನ ಆರೋಗ್ಯ ಕೂಡ ಅಗತ್ಯ ಎಂದು ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಂದ್ರಪ್ಪ ಸೇವಾ ಪ್ರತಿಷ್ಠಾನ, ಅರಿವು ವೇದಿಕೆ, ತಾಲೂಕು ಕಸಾಪ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಹಾಗೂ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ ಚಿಕಿತ್ಸಾ ಶಿಬಿರ ಉದ್ಘಾಟನೆ ಹಾಗೂ ಇತ್ತೀಚೆಗೆ ದೇಹ ದಾನ ಮಾಡಿದ ವಿಜ್ಞಾನ್ ಇಂಡಸ್ಟ್ರೀಸ್ ನಿವೃತ್ತ ನೌಕರ ದಾಸಣ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.

ವಿವಿಧ ಸಂಘ, ಸಂಸ್ಥೆಗಳು ಒಗ್ಗೂಡಿ ಕಣ್ಣಿನ ರಕ್ಷಣೆ ಮತ್ತು ಮಹತ್ವದ ಕುರಿರು ಅರಿವು ಮೂಡಿಸುವ ಉದ್ದೇಶದ ಜತೆಗೆ ಕಣ್ಣಿನ ಸಮಸ್ಯೆ ಹೋಗಲಾಡಿಸಲು ಪ್ರತಿ ತಿಂಗಳ ಮೊದಲ ಶುಕ್ರವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ ಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದೆ. ಈವರೆಗೆ 50ಕ್ಕೂ ಹೆಚ್ಚು ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕಳೆದ ಕೆಲ ದಿನಗಳ ಹಿಂದೆ ನಿಧನರಾದ ವಿಜ್ಞಾನ್ ಇಂಡಸ್ಟ್ರೀಸ್ ನಿವೃತ್ತ ನೌಕರ ದಾಸಣ್ಣ ಈ ಹಿಂದೆ ಆಯೋಜಿಸಿದ್ದ ಎಲ್ಲ ಶಿಬಿರಗಳಲ್ಲೂ ಭಾಗವಹಿಸಿ ಜನರ ಸಮಸ್ಯೆಗೆ ಸ್ಪಂದಿಸಿದ್ದರಲ್ಲದೇ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ 5 ವರ್ಷಗಳ ಹಿಂದೆ ಜೀವಂತವಿದ್ದಾಗಲೇ ಶಿವಮೊಗ್ಗ ಮೆಗ್ಗಾನ್ ವೈದ್ಯಕೀಯ ಭೋದನಾ ಕಾಲೇಜಿಗೆ ದೇಹ ದಾನ ಮಾಡಿ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದರು. ಇಂಥವರು ಇಂದಿನ ಸಮಾಜಕ್ಕೆ ಪ್ರೇರಣೆಯಾಗಬೇಕು ಎಂದರು.

ಶಿಬಿರದಲ್ಲಿ 110 ಮಂದಿ ನೇತ್ರ ತಪಾಸಣೆಗೊಳಪಟ್ಟರೆ, 39 ಮಂದಿ ಕಣ್ಣಿನ ಶಸ ಚಿಕಿತ್ಸೆಗೆ ಆಯ್ಕೆಯಾದರು. ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಪ್ರಮುಖರಾದ ಬಿ.ಎಸ್.ಭಗವಾನ್, ಇಮ್ರಾನ್ ಅಹಮದ್ ಬೇಗ್, ತ.ಮ.ದೇವಾನಂದ್, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net