

ಹುಬ್ಬಳ್ಳಿ: ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ ಸಹಯೋಗದಲ್ಲಿ ನಗರದ ಕೊಯಿನ್ ರಸ್ತೆಯ ಕೆಎಲ್ಇ-ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆಯಲ್ಲಿ ಮಂಗಳವಾರ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಮನುಷ್ಯನ ದೇಹದ ಪ್ರಮುಖ ಅಂಗ ಕಣ್ಣು. ಏನೇ ಸಮಸ್ಯೆ ಆದರೂ ಶೀಘ್ರವೇ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಇದರಿಂದ ಮುಂದಾಗುವ ಅನಾಹುತ ತಪ್ಪಿಸಲು ಸಾಧ್ಯ ಎಂದರು.
ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ, ಪುಂಡಲೀಕ ಅಪೀನಬೇಲ್, ಡಾ. ಶಿಲ್ಪಾ ಬಳಿಗಾರ, ಡಾ. ಶೀತಲ ಜಿ., ಡಾ.ಲಕ್ಷ್ಮೀ ಬಿ.ಆರ್., ಡಾ. ಅಪರಾನ ಹೊಸೂರ, ದೀಪಕ ಜಿತೂರಿ ಮತ್ತಿತರರಿದ್ದರು.