ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ

Prioritize extracurricular activities
ಗುಳೇದಗುಡ್ಡದ ರ್ಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಖಲೀಲ ಕೊತ್ತಲ, ಕೆ.ಆರ್. ರಾಯಚೂರ, ಎಂ.ಎಂ ಮಕಾನ್‌ದಾರ ಉದ್ಘಾಟಿಸಿದರು. ಎಂ.ಎನ್. ಹಣಗಿ, ರಾಜಮಹ್ಮದ ಕುದರಿ, ಮೌಲಾನಾ ಸೈಯದ್ ಅಖ್ತರ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ವಿದ್ಯಾರ್ಥಿಗಳು ಓದಿನಲ್ಲಿ ಶ್ರದ್ಧೆ, ಆಸಕ್ತಿ ಹೊಂದುವುದರ ಜತೆಗೆ ಶಿಕ್ಷಕರು ಹಾಗೂ ಪಾಲಕರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಖಲೀಲ ಕೊತ್ತಲ ಹೇಳಿದರು.

ಪಟ್ಟಣದ ಸರ್ಕಾರಿ ಉರ್ದು ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆಯದೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಸರ್ಕಾರ ಉರ್ದು ಶಾಲೆಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ರಾಯಚೂರ, ಬಡಿಮಸೀದಿ ಚೇರ್ಮನ್ ಎಂ.ಎಂ ಮಕಾನ್‌ದಾರ ಮಾತನಾಡಿದರು.

ಎಂ.ಎನ್. ಹಣಗಿ, ರಾಜಮಹ್ಮದ ಕುದರಿ, ಮೌಲಾನಾ ಸೈಯದ್ ಅಖ್ತರ, ಮುಖ್ಯ ಶಿಕ್ಷಕ ಸೈಯದ್ ಮಕಾನ್‌ದಾರ, ಶಿಕ್ಷಕರಾದ ಸುರೇಶ ಬಾಟ್, ಅಬೂಬಕರ ಮಕಾನದಾರ, ರಜಾನಾ ಕಲೇಗಾರ, ನಾಶೀರಾ ಕೊತ್ತಲ, ನಾಶೀರಾ ಹುಲ್ಲಿಕೇರಿ, ರಮೀಜಾ ರಾಮದುರ್ಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net