ಶೃಂಗೇರಿ ಪಟ್ಟಣದ ಸ್ವಚ್ಛತಗೆ ಆದ್ಯತೆ ನೀಡಿ

18sri-2
Published on

ಶೃಂಗೇರಿ: ಶ್ರೀಶಾರದಾ ಪೀಠ ಧಾರ್ಮಿಕ ಕ್ಷೇತ್ರವಾಗಿದ್ದು, ಕ್ಷೇತ್ರಕ್ಕೆ ಪ್ರತಿ ದಿನ ಭಕ್ತರು ಆಗಮಿಸುತ್ತಾರೆ. ನಮ್ಮ ಪಟ್ಟಣದ ಸುತ್ತಲೂ ಸ್ವಚ್ಛವಾಗಿರಬೇಕು ಎಂಬ ಉದ್ಧೇಶದಿಂದ ಮಲೆನಾಡು ನಾಗರಿಕ ಹಿತರಕ್ಷಣಾ ಸಮಿತಿ ದಾನಿಗಳ ಸಹಕಾರದಿಂದ ಪಟ್ಟಣದ ಸುತ್ತ ಸ್ವಚ್ಚತಾ ಕಾರ್ಯಕೈಗೊಂಡಿದೆ ಎಂದು ಸಮಿತಿಯ ಪಿ.ಬಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಭಾನುವಾರ ಸೂಚನಾ ಲಕ ಅಳವಡಿಸಿ ಮಾತನಾಡಿದ ಅವರು, ನವರಾತ್ರಿಯಲ್ಲಿ ಆರಂಭವಾದ ಸ್ವಚ್ಛತಾ ಕಾರ್ಯದಲ್ಲಿ ಬೈಪಾಸ್ ರಸ್ತೆಯ ತಡೆ ಗೋಡೆಗಳಿಗೆ ಬಣ್ಣ ಹಾಕಲಾಗಿದೆ. ಈಗಾಗಲೇ ರಸ್ತೆ ಅಕ್ಕ ಪಕ್ಕದಲ್ಲಿದ್ದ ತ್ಯಾಜ್ಯವನ್ನು ತೆಗೆದು, ರಸ್ತೆ ಬದಿಯನ್ನು ಸಮತಟ್ಟು ಮಾಡಲಾಗಿದೆ ಎಂದರು.

ಸಮಿತಿ ಪದಾಧಿಕಾರಿ ಎ.ಎಸ್.ನಯನ ಮಾತನಾಡಿ, ಸ್ವಚ್ಛತೆಯನ್ನು ಎಲ್ಲರೂ ಅನುಸರಿಸಿದರೆ ಮಾತ್ರ ರಸ್ತೆ ಮತ್ತು ಪಟ್ಟಣ ಸ್ವಚ್ಛವಾಗಿರಲು ಸಾಧ್ಯ. ತ್ಯಾಜ್ಯವನ್ನು ನಿಗದಿತ ಸ್ಥಳದಲ್ಲಿ ಹಾಕಬೇಕು. ತುಂಗಾ ನದಿಯಲ್ಲಿ ಕಸ ಬಿಸಾಡುವುದು, ಪ್ಲಾಸ್ಟಿಕ್ ತ್ಯಾಜ್ಯ ನದಿಗೆ ಹಾಕುವುದನ್ನು ತಡೆಯಬೇಕಿದೆ. ಜಾಗೃತಿ ಸಮಿತಿಯಿಂದ ಲಕ ಅಳವಡಿಸಬೇಕಿದೆ. ಎಂದರು.

ಪಪಂ ಅಧ್ಯಕ್ಷ ವೇಣುಗೋಪಾಲ್,ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ಟಿ.ಟಿ.ಕಳಸಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net