ಮನೆ ಸುತ್ತಮುತ್ತಲು ಸ್ವಚ್ಛತೆಗೆ ಆದ್ಯತೆ ನೀಡಿ

Prioritize cleanliness around the house
ಬಸವನಬಾಗೇವಾಡಿ ಪಟ್ಟಣದ ಮಸಿಬಿನಾಳ ರಸ್ತೆಯ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದಲ್ಲಿ ಪರಿಸರ ದಿನಾಚರಣೆಯಲ್ಲಿ ಸಸಿ ವಿತರಿಸಲಾಯಿತು. ಸಿದ್ಧಲಿಂಗ ಶ್ರೀಗಳು, ವಿನೂತ ಕಲ್ಲೂರ, ಶಿವರುದ್ರಯ್ಯ ಹಿರೇಮಠ, ರವಿಗೌಡ ಚಿಕ್ಕೊಂಡ, ಶಿವಾನಂದ ತೊಳನೂರ ಇತರರಿದ್ದರು.
Published on

ಬಸವನಬಾಗೇವಾಡಿ: ಹಸಿರೇ ಉಸಿರು, ಹಸಿರು ಹಾಳಾದರೆ ಉಸಿರು ನಿಂತಂತೆ. ಇದನ್ನು ಅರಿತುಕೊಂಡು ಪ್ರತಿಯೊಬ್ಬರೂ ಪರಿಸರದ ಸಂರಣೆ ಮಾಡಬೇಕು ಎಂದು ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿವೇಕ್​ ಬ್ರಿಗೇಡ್​ ಸಂಸ್ಥೆ ಹಾಗೂ ವಿಜಯವಾಣಿ ಕನ್ನಡ ದಿನಪತ್ರಿಕೆ ಸಹಯೋಗದಲ್ಲಿ ಪಟ್ಟಣದ ಮಸಿಬಿನಾಳ ರಸ್ತೆಯ ಗಣೇಶ ನಗರದ ಯಲ್ಲಾಲಿಂಗೇಶ್ವರ ಮಠದಲ್ಲಿ ಹಾಗೂ ನಂದಿ ಬಡಾವಣೆಯಲ್ಲಿ ಬುಧವಾರ ಸಸಿ ನೆಟ್ಟು ಅವರು ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು. ಅಂದಾಗ ಮಾತ್ರ ಪ್ರತಿಯೊಂದು ಜೀವರಾಶಿ ಕೂಡ ಆರೋಗ್ಯದಿಂದ ಬದುಕಿ ಬಾಳಲು ಸಾಧ್ಯವಾಗುತ್ತದೆ. ಕಾಡುಗಳು ನಾಡಾಗುತ್ತಿದ್ದು ಅಲ್ಲಿನ ಅನೇಕ ವನ್ಯ ಜೀವಿಗಳು ನಾಡಿನತ್ತ ಬರುವ ಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಮತ್ತು ಪರಿಸರ ಹಾಳಾದರೆ ಮನುಷ್ಯನ ಬದುಕು ಕೂಡ ಹಾಳಾಗುತ್ತದೆ. ಹೀಗಾಗಿ ಪರಿಸರ ಉಳಿಸಿ ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಿದಾಗ ಮಾತ್ರ ನಾಡುಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿವೇಕ ಬ್ರಿಗೇಡ್​ ಮುಖ್ಯಸ್ಥ ವಿನೂತ ಕಲ್ಲೂರ ಮಾತನಾಡಿ, ಪ್ರತಿವರ್ಷ ನಮ್ಮ ಸಂಸ್ಥೆಯಿಂದ ವಿಜಯವಾಣಿ ಪತ್ರಿಕೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಪಟ್ಟಣದ ಅನೇಕ ಶಾಲಾ ಕಾಲೇಜುಗಳು, ಮಠ ಮಂದಿರಗಳಲ್ಲಿ, ವಿವಿಧ ನಗರ ಪ್ರದೇಶದ ಬಡಾವಣೆಯ ಉದ್ಯಾನವನಗಳಲ್ಲಿ ಸಾವಿರಾರು ಸಸಿಗಳನ್ನು ನೆಡುವ ಮೂಲಕ ಆಚರಿಸಲಾಗುತ್ತದೆ. ಜನರಲ್ಲಿ ಪರಿಸರ ರಕ್ಷಣೆ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಯಲ್ಲಾಲಿಂಗಮಠದ ಶ್ರೀಗಳು, ಕ.ಸಾ.ಪ ಮಾಜಿ ಅಧ್ಯ ಶಿವರುದ್ರಯ್ಯ ಹಿರೇಮಠ, ರವಿಗೌಡ ಚಿಕ್ಕೊಂಡ, ಶಿವಾನಂದ ತೊಳನೂರ, ಪ್ರಭಾಕರ ಖೇಡದ, ಪಥ್ವಿ ನಾಯ್ಕೋಡಿ, ಮಲ್ಲಿಕಾರ್ಜುನ ಅವಟಿ, ಸಂಗು ಹುಜರತಿ, ಕುಮಾರ ಕಲ್ಲೂರ, ಸಂಗಪ್ಪ ಕುಂಬಾರ, ಕುಶಾಲ ಕೊಟ್ರಶೆಟ್ಟಿ, ಸಚೀನ ಕಲ್ಲೂರ, ರಮೇಶ ಆರೇಶಂಕರ, ಈರಣ್ಣ ಒನರೊಟ್ಟಿ, ಸಂಗಮೇಶ ಮುಳವಾಡ, ಎನ್​.ವಿ. ಕಲ್ಲೂರ, ಆಕಾಶ ಆರೇಶಂಕರ, ಪ್ರಶಾಂತ ಡೋಣೂರ, ಬಸವರಾಜ ಹುಲಸೂರ, ಮಾಳು ಆರೇಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net