ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ಸೆರೆ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೈದಿ

ಕಅಇದಿ
Published on

ಕಲಬುರಗಿ: ಜಿಮ್ಸ್ ಆಸ್ಪತ್ರೆಯಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಂಚೋಳಿ ಮೂಲದವನಾಗಿರುವ ಮುಜೀಬ್​ ಅಲಿಯಾಸ್​ ಮಟಕಾ ಮಾಜಿದ್​ ಸುಲಿಗೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನೆರೆರಾಜ್ಯವಾದ ತೆಲಂಗಾಣದಲ್ಲಿಯೂ ಸಹ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಯಾವುದೋ ಒಂದು ಪ್ರಕರಣದ ಮೇರೆಗೆ ಮಾಜಿದ್​ನನ್ನು ನ್ಯಾಯಾಂಗ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆತನನ್ನು ಜಿಮ್ಸ್​ ಆಸ್ಪತ್ರೆಗೆ ಸೇರಿಸಲಾಗಿತ್ತು. ಫೆ.16ರಂದು ಶೌಚಗೃಹಕ್ಕೆ ಹೋಗುತ್ತೇನೆಂದು ತೆರಳಿದ ಕೈದಿ ಅಲ್ಲಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ.

ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ಹೈದರಾಬಾದ್​ಗೆ ಹೋಗಿದ್ದ. ಗುರುವಾರದಂದು ಮುಂಜಾನೆ 3 ಗಂಟೆಯ ಸಮಯಕ್ಕೆ ನಗರದ ರೈಲ್ವೆ ನಿಲ್ದಾಣಕ್ಕೆ ಮರಳಿದ ಕೈದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಕೈದಿಯನ್ನು ನ್ಯಾಯಾಂಗ ವಶಕ್ಕೆ ನೀಡಿರುವುದಾಗಿ ನಗರ ಪೊಲೀಸ್​ ಆಯುಕ್ತ ಎಂ.ಎನ್​.ನಾಗರಾಜ್​ ಮತ್ತು ಡಿಸಿಪಿ ಕಿಶೋರ್​ಬಾಬು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net