ತತ್ವಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ

Hospet Kvv
ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿದರು. ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ್ ಯತಗಲ್, ಎನ್ನೆಸ್ಸೆಸ್ ಘಟಕದ ಸಂಯೋಜಕ ಡಾ.ಎ.ಶ್ರೀಧರ ಇದ್ದರು.
Published on

ಹೊಸಪೇಟೆ: ತತ್ವದ ಮೇಲೆ ಜೀವನ ಅಡಗಿದೆ. ಪ್ರತಿಯೊಬ್ಬರಲ್ಲಿ ತತ್ವ ಎಂಬುದು ಅಂತರಾಳದಲ್ಲಿದ್ದು, ಅದನ್ನು ಸರಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಹೇಳಿದರು.

ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ವಚನ ಸಾಹಿತ್ಯ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಧಾರ್ಮಿಕ ಗ್ರಂಥಗಳು ಮನುಷ್ಯನಿಂದಾಗಿವೆಯೇ ಹೊರತು ಅವುಗಳಿಂದ ಮನುಷ್ಯನಲ್ಲ. ಗ್ರಂಥಗಳು ಪಾಂಡಿತ್ಯ ನೀಡಿದರೆ, ಅದರ ಅನುಭವವನ್ನು ನಾವು ಸ್ವತಃ ಗಳಿಸಬೇಕು. ದೇಹ ಮತ್ತು ಮನಸು ಒಂದುಗೂಡಿ ತತ್ವಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು.

ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ರವೀಂದ್ರನಾಥ ಮಾತಾನಾಡಿ, ಅರಿವನ್ನು ಮೂಡಿಸುವಲ್ಲಿ ವಚನ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ. ವಚನ ಸಾಹಿತ್ಯದಲ್ಲಿ ಅಡಗಿರುವ ತತ್ವಗಳ ಪಾಲಿಸುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net