

ಹಟ್ಟಿಚಿನ್ನದಗಣಿ: ದಾಸರಲ್ಲಿಯೇ ಶ್ರೇಷ್ಠವಾದವರು ಕನಕದಾಸರು. ಅವರ ಕೀರ್ತನೆಗಳು ಪ್ರಸ್ತುತ ಜೀವನಕ್ಕೂ ಅನ್ವಯ ಎಂದು ಪಿಐ ಹೊಸಕೇರಪ್ಪ.ಕೆ ಹೇಳಿದರು.
ಇದನ್ನೂ ಓದಿ:
ಪಟ್ಟಣದ ಕೋಠಾ ಕ್ರಾಸ್ ಬಳಿ ಕನಕದಾಸ ವೃತ್ತದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ಸೋಮವಾರ ಮಾತನಾಡಿದರು. ಕನಕದಾಸರ ಆದರ್ಶ ತತ್ವಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಪಾಲಿಸಬೇಕು ಎಂದರು.
ಎನ್.ಸ್ವಾಮಿ ನಾಯಿಕೊಡಿ ಮಾತನಾಡಿ, ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ವರ್ಣ, ಜಾತಿ ಪದ್ಧತಿ ವಿರುದ್ಧ ಆಗಿನ ಕಾಲದಲ್ಲಿಯೇ ಕೀರ್ತನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಮುಖ ಪಾತ್ರವಹಿಸಿದ್ದರು ಎಂದರು.
ಪಪಂ, ಚಿನ್ನದಗಣಿ ಹಾಗೂ ಪೊಲೀಸ್ ಠಾಣೆಯಲ್ಲಿ ಸರಳವಾಗಿ ಕನಕದಾಸರ ಜಯಂತಿ ಆಚರಿಸಲಾಯಿತು. ಪಪಂ ಉಪಾಧ್ಯಕ್ಷೆ ನಾಗರತ್ನ ಗುರಿಕಾರ, ಕಾರ್ಮಿಕ ಸಂಘದ ಉಪಾಧ್ಯಕ್ಷ ತಿಪ್ಪಣ್ಣ, ಪ್ರಮುಖರಾದ ಸುನಿತಾ, ಅಮ್ಜದ್‌ಶೇಠ, ಹನುಮಂತರಡ್ಡಿ, ಪರಮಾತ್ಮ ಯಾದವ, ಶೇಖರ ಮಾಸ್ತರ, ಮೌಲಸಾಬ್, ಗಂಗಾಧರ ಶಾಖಾವಾದಿ, ಬಸವರಾಜಗೌಡ, ಕನಕರಾಜಗೌಡ, ಅಂಜನೇಯ್ಯಗೌಡ, ರಮೇಶ ಉಳಿಮೇಶ್ವರ, ಶಿವಪ್ರಸಾದ, ಅಶೋಕ, ಲಕ್ಷ್ಮಣ ಇತರರಿದ್ದರು.