ಹುಬ್ಬಳ್ಳಿಯಲ್ಲಿ ಪ್ರಾಚಾರ್ಯರ ಸಮ್ಮೇಳನ

IMG-20240921-WA0010-1.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಉತ್ತರ ಕರ್ನಾಟಕ ಸಹೋದಯ ವತಿಯಿಂದ ವಿದ್ಯಾನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಪ್ರಾಚಾರ್ಯರ ಮಹಾಸಮ್ಮೇಳನ ಏರ್ಪಡಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಮೇರಿ ಓಸೆಫ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. 21ನೇ ಶತಮಾನದಲ್ಲಿ ದತ್ತಾಂಶ ವಿಜ್ಞಾನಿಯಾಗಿ ಪ್ರಾಚಾರ್ಯ ಕುರಿತು ಉಪನ್ಯಾಸ ನೀಡಿದರು.

ಶುಭಂ ಕ್ರಿಯೇಷನ್ಸ್ ಮುಖ್ಯಸ್ಥ ಮುಖೇಶ ಹಿಂಗಾರ, ವಿವಿಧೆಡೆಯ 60ಕ್ಕೂ ಹೆಚ್ಚು ಪ್ರಾಚಾರ್ಯರು ಪಾಲ್ಗೊಂಡಿದ್ದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.

ಶುಭಾಂಗಿ ಮೋರೆ ಸ್ವಾಗತಿಸಿದರು. ಹುಧಾ ಉತ್ತರ ಕರ್ನಾಟಕ ಸಹೋದಯ ಕಾರ್ಯದರ್ಶಿ ವಿನಾಯಕ ಆರ್. ಅವರು ಅತಿಥಿಗಳ ಪರಿಚಯ ಮಾಡಿದರು. ಎಸ್.ಆರ್. ಬೊಮ್ಮಾಯಿ ರೋಟರಿ ಶಾಲೆಯ ಪ್ರಾಚಾರ್ಯ ರೇಖಾ ತುಪ್ಪದ ಅವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು. ರಜನಿ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net