ವಿದ್ಯಾರ್ಥಿಮಿತ್ರ ಓದಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ

hnl vidyartimitra june 24
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;
Published on

ಹೊನ್ನಾಳಿ: ವಿಜಯವಾಣಿ ಹೊರ ತಂದಿರುವ ವಿದ್ಯಾರ್ಥಿಮಿತ್ರ ಬಹೂಪಯೋಗಿ ಪತ್ರಿಕೆಯಾಗಿದ್ದು, ಇದನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಶೇ. 100 ರಷ್ಟು ಅಂಕ ಗಳಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಪ್ರಾಚಾರ್ಯ ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಸಿಂಗಟಗೆರೆ ಗ್ರಾಮ ಸಮೀಪದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ಉದ್ಯೋಗಾಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಮಾಹಿತಿ ದೊರೆಯುತ್ತದೆ ಎಂದರು.

ಕಳೆದ ವರ್ಷ ನಮ್ಮ ವಸತಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಇದಕ್ಕೆ ಶಿಕ್ಷಕರ ಶ್ರಮದ ಜತೆಗೆ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ. ಶಾಲೆಯಲ್ಲಿ ಹೇಳಿಕೊಟ್ಟ ಪಾಠದ ಜತೆಗೆ ವಿದ್ಯಾರ್ಥಿಮಿತ್ರವನ್ನು ಪ್ರತಿನಿತ್ಯ ಅರ್ಧಗಂಟೆ ಅಧ್ಯಯನ ಮಾಡಿದರೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬಹುದು ಎಂದು ತಿಳಿಸಿದರು.

ಪತ್ರಕರ್ತ ಶ್ರೀನಿವಾಸ್ ಮಾತನಾಡಿ, ಪರಿಸರ, ಯೋಗ, ಶಿಕ್ಷಣ ಸೇರಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ವಿಜಯವಾಣಿ ಪತ್ರಿಕೆ ತೊಡಗಿಸಿಕೊಂಡಿದೆ. ಹಾಗೆಯೇ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದ್ಯಾರ್ಥಿಮಿತ್ರವನ್ನು ಹೊರ ತಂದಿದೆ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ಶಿಕ್ಷಕರಾದ ಹಾಲೇಶ್​ನಾಯ್್ಕ ಭೀಮಾನಾಯ್್ಕ ಸುರೇಶ್, ನಸರುಲ್ಲಾ, ಪ್ರದೀಪ್​ಕುಮಾರ್, ಉರ್ಬಖುತೇಜಾ ಖಾನಂ, ಚೈತ್ರಾ, ಶಬಿನಾ, ಕಿರಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net