

ಚನ್ನಮ್ಮನ ಕಿತ್ತೂರು: ಇವತ್ತು ತಾಲೂಕಿನಲ್ಲಿಯೇ ಎಲ್ಲರೂ ಗುರುತಿಸುವಂತಹ ಸರ್ಕಾರಿ ಕಾಲೇಜು ತಯಾರಾಗಿದೆ ಎಂದರೆ, ಅದರ ಮುಖ್ಯಶಕ್ತಿ ಪ್ರಾಚಾರ್ಯ ಗಣಾಚಾರಿ ಜಿ.ಎಂ. ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು. ಪಟ್ಟಣದ ಸರ್ಕಾರಿ ಆರ್‌ಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಜಿ.ಎಂ. ಗಣಾಚಾರಿ ಸೇವಾ ನಿವೃತ್ತರಾದ ಹಿನ್ನೆಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕೆಂದರೆ ಗುರು ಬೇಕು. ಉತ್ತಮ ಪ್ರಜೆಯನ್ನಾಗಿ ನಿರ್ಮಿಸುವ ಶಕ್ತಿ ಶಿಕ್ಷಕರಲ್ಲಿರುತ್ತದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ. ತುಬಾಕದ ಮಾತನಾಡಿ, ಗಣಾಚಾರಿ ಅವರು ಸಿದ್ದೇಶ್ವರ ಸ್ವಾಮೀಜಿ ಪಟ್ಟದ ಶಿಷ್ಯರು. ಯೂಟ್ಯೂಬ್ ಮೂಲಕ ಸಿದ್ದೇಶ್ವರ ಸ್ವಾಮೀಜಿಯ ಪರಿಚಯಿಸಿದ ಮೊದಲಿಗರು ಎಂದರು. ಪ್ರಾಚಾರ್ಯ ಜಿ.ಎಂ. ಗಣಾಚಾರಿ ಮಾತನಾಡಿದರು. ಎ.ಎಸ್. ಹಾಲಪ್ಪನವರ್ ಪ್ರಾಸ್ತಾವಿಕ ಮಾತನಾಡಿದರು. ಆರ್.ಎಂ. ಶಹಾಪುರ, ಪಿ.ಬಿ. ಲದ್ದಿಮಠ, ಎಂ.ಆರ್. ಉಳ್ಳಾಗಡ್ಡಿ, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ತಾನೇಶ ಲಮಾಣಿ, ರೇಣುಕಾರಾಧ್ಯ, ಸುಮಾ ಗಣಾಚಾರಿ, ಶ್ರೀಶೈಲ ಕಾಪಸೆ, ಬಿರಾದಾರ, ಎನ್.ಬಿ. ಶಿರಶ್ಯಾಡ ಇತರರಿದ್ದರು.