

ಹಿರೇಕೆರೂರ: ಕೀಳರಿಮೆ ಬಿಟ್ಟು ನಿರಂತರ ಶ್ರಮಪಟ್ಟರೆ ಸಾಧನೆ ಸಾಧ್ಯ ಎಂದು ಸುಣ್ಣಕಲ್ಬಿದರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಎನ್. ಸುರೇಶಕುಮಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಮುಖ್ಯ. ಶಾಲಾ-ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಭು ಮಳವಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಕುಮಾರ ಮಾನೇರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರವಿ ಚಂದಿ, ಚೋಳರಾಜ ಲಕ್ಕೊಳ್ಳಿ, ಸುನಿತಾ ಬೊಂಗಾಳೆ, ದುರ್ಗಪ್ಪ ತಿರುಕಪ್ಪನವರ್, ಗಂಗಪ್ಪ ಗಿರಿಮಳ್ಳಿಯವರ ಇದ್ದರು. ವಿದ್ಯಾರ್ಥಿನಿಯರಾದ ಗೀತಶ್ರೀ, ಸುಮಿತ್ರಾ ನಿಟ್ಟೂರ, ಪವಿತ್ರ ಕಮ್ಮಾರ, ಬಿಂದುಶ್ರೀ ನಿರ್ವಹಿಸಿದರು.