ಆದಿಕವಿ ಬದುಕು ಆದರ್ಶನೀಯ

28-10--krs1
Published on

ಶ್ರೀರಂಗಪಟ್ಟಣ: ಮಹಾಕಾವ್ಯ ರಾಮಾಯಣ ಬರೆದ ಆದಿಕವಿ ವಾಲ್ಮೀಕಿ ಅವರ ಬದುಕು ಸರ್ವಧರ್ಮದ ಜನರಿಗೂ ಸರ್ವಕಾಲಕ್ಕೂ ಆದರ್ಶನೀಯ ಎಂದು ಶ್ರೀ ಅಹಲ್ಯಾದೇವಿ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.


ತಾಲೂಕಿನ ಆರತಿ ಉಕ್ಕಡ ಗ್ರಾಮದ ಶಕ್ತಿದೇವತೆ ದೇವಾಲಯದ ಆವರಣದಲ್ಲಿ ಶನಿವಾರ ವಾಲ್ಮೀಕಿ ಜಯಂತಿ ಪ್ರಯುಕ್ತ ಸಮುದಾಯ ಜನರು ಹಾಗೂ ಗ್ರಾಮಸ್ಥರೊಂದಿಗೆ ಮಹಾಕವಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


ಯಾವುದೇ ವ್ಯಕ್ತಿಯಾಗಲಿ ಧಾರ್ಮಿಕತೆಯಲ್ಲಿ ನಂಬಿಕೆ ಹೊಂದಿದ್ದರೆ ಆತನ ಮನಸ್ಸು ಹಾಗೂ ನಡೆ ಸಮಾಜಮುಖಿಯಾಗಿ ಪರಿವರ್ತನೆಯಾಗುತ್ತದೆ ಎಂಬುದನ್ನು ಆದಿ ಕವಿ ವಾಲ್ಮೀಕಿ ಸಾಬೀತುಪಡಿಸಿದ್ದಾರೆ. ಸತ್ಯ ಹಾಗೂ ಸತ್ವಯುತ ಸಾಹಿತ್ಯ ಕೃಷಿಗೆ ಮಹಾಕವಿ ಕೊಡುಗೆ ಅನನ್ಯ ಎಂದರು.

ಶ್ರೀ ಅಹಲ್ಯಾದೇವಿ ದೇವಾಲಯ ಟ್ರಸ್ಟ್ ಸದಸ್ಯರಾದ ವಿಶ್ವೇಶ್ವರಯ್ಯ, ಮರಿಯಪ್ಪ, ಲೋಕೇಶ್, ಭೂತಯ್ಯ, ಜವರಯ್ಯ, ಕುಮಾರ್, ಕ್ಯಾತನಹಳ್ಳಿ ಕುಮಾರ್, ಅರ್ಚಕರು, ಸಿಬ್ಬಂದಿ ಹಾಗೂ ಆರತಿ ಉಕ್ಕಡ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net