

ಕೊಪ್ಪಳ: ಬಡ್ತಿ ಸೇರಿ ಇತರ ವಿಷಯಗಳಲ್ಲಿನ ಅನ್ಯಾಯ ಖಂಡಿಸಿ ಆ.12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಸಂದ ಜಿಲ್ಲಾಧ್ಯಕ್ಷ ಶರಣ ಬಸನಗೌಡ ಪಾಟೀಲ್ ತಿಳಿಸಿದರು.
ಸದ್ಯ ಇರುವ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಂದ ನಮಗೆ ಅನ್ಯಾಯವಾಗುತ್ತಿದೆ. ನಾವು ನೇಮಕ ಆದಾಗ ಇದ್ದ ನಿಯಮಾನುಸಾರ 1&7ನೇ ತರಗತಿಗೆ ಪಾಠ ಮಾಡುತ್ತಿದ್ದೇವೆ. ಪದವೀಧರ ಶಿಕ್ಷಕರು ಇಲ್ಲದ ಕಡೆಗಳಲ್ಲಿ ನಾವೇ ಪಾಠ ಮಾಡುತ್ತಿದ್ದೇವೆ. ಸೇವಾ ಜೇಷ್ಠತೆ ಆಧರಿಸಿ ಪದವಿ, ಸ್ನಾತಕ ಪದವಿ, ಬಿಇಡಿ ಮಾಡಿಕೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯ ಸಂಟನೆ ಕರೆಯಂತೆ ಹೋರಾಟ ರೂಪಿಸಿದ್ದೇವೆ. ಆ.7ರಂದು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ನಂತರ ಹೋರಾಟ ಆರಂಭವಾಗಲಿದೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮ 2016ಕ್ಕಿಂತ ಮೊದಲು ನೇಮಕವಾದವರಿಗೆ ಅನ್ವಯಿಸಬಾರದು. ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು. ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದಗೆ ಸೇವಾ ಜೇಷ್ಠ್ಠತೆ ಆಧರಿಸಿ ಬಡ್ತಿ ನೀಡಬೇಕು ಎಂದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ, ಗೌರವಾಧ್ಯಕ್ಷ ವೀರಪ್ಪ ಬಳ್ಳೊಳ್ಳಿ, ಸಹ ಕಾರ್ಯದರ್ಶಿ ಬಸವರಾಜ, ಹನುಮೇಶ ಆಚಾರ್ ಇತರರಿದ್ದರು.