

ಮಂಗಳೂರು: ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಆಯೋಜಿಸಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಎಲ್ಲ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಲಾಗಿದೆ.
ಆರೋಗ್ಯ ಸಮಸ್ಯೆ ಎದುರಾದರೆ ಪ್ರಥಮ ಚಿಕಿತ್ಸಾ ಘಟಕ, ವಿಚಾರಣೆ ಕೌಂಟರ್, ಕುಡಿಯುವ ನೀರು, ಶೌಚಾಲಯ, ಆಹಾರದ ವ್ಯವಸ್ಥೆ ಸೇರಿದಂತೆ ಫಲಾನುಭವಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಪೂರಕವಾಗಿ ವ್ಯವಸ್ಥೆ ಜೋಡಿಸಲಾಗಿದೆ.