ಪ್ರಧಾನಿ ನರೇಂದ್ರ ಮೋದಿ ಬದುಕೇ ನಮಗೆ ಮಾದರಿ

17 ಎಸ್ಕೆಪಿ_2
ಶಿಕಾರಿಪುರದಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದರ ರಕ್ತದಾನ ಶಿಬಿರದಲ್ಲಿ ಬಿ.ವೈ.ವಿಜಯೇಂದ್ರ, ಕೆ.ಎಸ್.ಗುರುಮೂರ್ತಿ, ಎಂ.ಬಿ.ಚನ್ನವೀರಪ್ಪ, ವೀರೇಂದ್ರ ಪಾಟೀಲ್ ಇತರರಿದ್ದರು.
Published on

ಶಿಕಾರಿಪುರ: ಜಗತ್ತಿನ ಅಗ್ರಗಣ್ಯ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಅವರ ಬದುಕು ಪೂರ್ಣವಾಗಿ ದೇಶಕ್ಕಾಗಿ, ಸಮಾಜಕ್ಕಾಗಿಯೇ ಸಮರ್ಪಿತ. ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ಅವರ ಬದುಕೇ ನಮಗೆ ಸದಾ ಮಾದರಿ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ದತ್ತಮಠದ ಸಭಾಭವನದಲ್ಲಿ ಭಾನುವಾರ ಪ್ರಧಾನಿ ಮೋದಿ ಜನ್ಮದಿನದ ನಿಮಿತ್ತ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಲೋಕಹಿತಂ ಮಮಕರಣೀಯಮ್ ಎಂಬುದೊಂದೇ ಪ್ರಧಾನಿ ನರೇಂದ್ರ ಮೋದಿ ಅವರ ಮಂತ್ರ. ಇವತ್ತು ಭಾರತ ಎಲ್ಲ ಕ್ಷೇತ್ರದಲ್ಲೂ ಅಗ್ರಗಣ್ಯ ರಾಷ್ಟ್ರ ಗಳಿಗೆ ಸರಿ ಸಮನಾಗಿ ನಿಂತಿದೆ ಎಂದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ಸ್ಫೂರ್ತಿ, ಮಾದರಿ ಎಂದರೆ ಅದು ಪ್ರಧಾನಿ ಮೋದಿ. ಒಬ್ಬ ನಾಯಕ ಹೇಗಿರಬೇಕು ಎನ್ನುವುದನ್ನು ಮೋದಿ ಅವರು ಸಾಕ್ಷೀಕರಿಸಿದ್ದಾರೆ ಎಂದು ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಧಾನಿ ಮೋದಿಯವರಲ್ಲಿ ನಾಯಕತ್ವವನ್ನು ಕಂಡಿವೆ. ವಿಶ್ವದ ಹಿರಿಯಣ್ಣ ಅಮೆರಿಕ ಕೂಡ ಮೋದಿ ಅವರ ಪ್ರಬುದ್ಧತೆ, ಸಮರ್ಥ ಆಡಳಿತ, ವಿವಾದವಿಲ್ಲದ ವಿದೇಶಾಂಗ ನೀತಿ, ಆರ್ಥಿಕ ಸುಸ್ಥಿತಿ ಸೇರಿದಂತೆ ಅವರ ಪ್ರತಿ ಹೆಜ್ಜೆಗಳನ್ನು ಗಮನಿಸಿ ಪರಸ್ಪರ ಸ್ನೇಹ, ಸೌಹಾರ್ದದ ಕೈ ಚಾಚಿದೆ. ಎಷ್ಟೋ ರಾಷ್ಟ್ರ ಗಳು ಮೋದಿ ಮತ್ತೆ ಭಾರತದ ಪ್ರಧಾನಿ ಆಗಬೇಕೆಂದು ಬಯಸುತ್ತಿವೆ ಎಂದು ತಿಳಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಿವರಾಜ್ ಪಾಟೀಲ್, ಕಾರ್ಯದರ್ಶಿ ಶ್ರೀನಿವಾಸಲು, ರಾಜೇಂದ್ರ, ಬೆಣ್ಣೆ ಪ್ರವೀಣ್, ನಿವೇದಿತಾ ರಾಜು, ಗಾಯತ್ರಿ ಮಲ್ಲಪ್ಪ, ಎಚ್.ಟಿ.ಬಳಿಗಾರ್, ಪ್ರವೀಣ್, ರೂಪಾ ಬಸವರಾಜ್, ಮಲ್ಲೇಶಪ್ಪ, ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net