

ಸಿಂದಗಿ: ಅಭಿವೃದ್ಧೀಶಿಲ ಭಾರತಕ್ಕೆ ಬಿಜೆಪಿ ಪಕ್ಷವೇ ದೃಢವಾದ ಭರವಸೆ. ಪ್ರಧಾನಿಯಾಗಿ ನರೇಂದ್ರ ಮೋದಿಜಿ ಮತ್ತೆ ಗದ್ದುಗೆ ಏರುವರು ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.
ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಭಾನುವಾರ ಚಾಂದಕವಠೆ ಹಾಗೂ ಬಳಗಾನೂರ ಮಹಾಶಕ್ತಿ ಕೇಂದ್ರದ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಿದರೂ ಅವರಿಗೆ ಉತ್ತರ ಕೊಡಲು ಹೋಗಲ್ಲ. ನನ್ನ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಸಾವಿರಾರು ಮತಗಳ ಅಂತರದಿಂದ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಅಧ್ಯ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಕೇಂದ್ರ ಸರ್ಕಾರದ ಅಭಿವೃದಿ ್ಧಪರವಾದ ಕೆಲಸ ಮತ್ತು ಪ್ರಧಾನಿ ಮೋದಿ ಅವರ ಕಾರ್ಯಗಳನ್ನು ಮತದಾರರಿಗೆ ಮನಮುಟ್ಟುವಂತೆ ತಿಳಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು.ಮಾಜಿ
ಎಂಎಲ್ಸಿ ಅರುಣ ಶಹಾಪೂರ, ಅಶೋಕ ಅಲ್ಲಾಪೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಎನ್. ಪಾಟೀಲ ಮಂಡಲ ಅಧ್ಯ ಸಂತೋಷ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ, ಮಾಜಿ ಸದಸ್ಯ ಬಿ.ಆರ್. ಯಂಟಮಾನ, ಮಲ್ಲು ಬಾದನ, ಮಲ್ಲಿಕಾರ್ಜುನ ಜೋಗೂರ, ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಪ್ರಕಾಶ ಹಿರೇಕುರುಬರ, ಮಲ್ಲಿ ಕುಂಬಾರ, ಸಿದ್ದು ಬುಳ್ಳಾ, ಪಂಡಿತ ಚೌಧರಿ, ಗುರು ತಳವಾರ, ಗುರು ಹುಲ್ಲೂರ, ಸಿದ್ರಾಮ ಆನಗೊಂಡ ಸೇರಿದಂತೆ ಮಾಹಾಶಕ್ತಿ ಕೇಂದ್ರ ಹಾಗೂ ಬೂತ್ ಅಧ್ಯರು ಮತ್ತು ಪೇಜ್ ಪ್ರಮುಖರು ಹಾಗೂ ಕಾರ್ಯಕರ್ತರಿದ್ದರು.