

ಸೊರಬ: ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಮತ್ತು ದೇಶದ ಆರ್ಥಿಕತೆಯನ್ನು ಉನ್ನತ ಮಟ್ಟಕ್ಕೆ ಏರಿಸುತ್ತಿರುವ ಧೀಮಂತ ನಾಯಕ ಎಂದು ಬಿಜೆಪಿ ಯುವ ಮುಖಂಡ ಡಾ. ಈ.ಎಚ್.ಜ್ಞಾನೇಶ್ ಬಣ್ಣಿಸಿದರು.
ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಹೊರ ರೋಗಿಗಳಿಗೆ ಹಣ್ಣು ವಿತರಣೆ ವೇಳೆ ಮಾತನಾಡಿ, ದೇಶ ಕಂಡ ಅದ್ಭುತ ಪ್ರಧಾನಿ ನರೇಂದ್ರ ಮೋದಿ. ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಯುವ ಮೋರ್ಚಾ ಅಧ್ಯಕ್ಷ ಅಭಿಷೇಕ್‌ಗೌಡ ಬೆನ್ನೂರು, ಜಿಪಂ ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ಪುರಸಭಾ ಸದಸ್ಯ ಪ್ರಭು ಮೇಸ್ತ್ರಿ, ಪ್ರಮುಖರು ದೇವೇಂದ್ರಪ್ಪ ಚನ್ನಾಪುರ, ಆಶಿಶ್ ನಾಗಪ್ಪ, ಸಂಜಯ್ ತಡಗಳಲೆ, ರಾಜು ಮಾವಿನ ಬಳ್ಳಿಕೊಪ್ಪ, ನಂದೇಶ್, ವೀರೇಶ್, ಶಿವರಾಜ್, ಯೋಗೇಶ್ ಇತರರಿದ್ದರು.