ಪ್ರಧಾನಿ ನರೇಂದ್ರ ಮೋದಿ ಸಾಧನೆ ಕುರಿತು ಮನೆ ಮನೆಗೆ ಮಾಹಿತಿ; ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್

100620 Maski Modi 1 Year Achivement Pamplent
Published on

ಮಸ್ಕಿ: ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಜನಪರ ಯೋಜನೆಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸಬೇಕೆಂದು ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದ ತೇರಿನ ಮನೆ ಹತ್ತಿರ ಇರುವ ನಿವಾಸಿಗಳ ಮನೆ ಮನೆಗೆ ಮಂಗಳವಾರ ಭೇಟಿ ನೀಡಿ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಸಾಧನೆಯನ್ನು ಜನರಿಗೆ ತಿಳಿಸಲು ಕರಪತ್ರ ಹಂಚಿ ಮಾತನಾಡಿದರು.

ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಒಂದು ವರ್ಷದ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕೆಂಬ ಉದ್ದೇಶದಿಂದ ಪ್ರತಿ ಬೂತ್‌ಗೆ 150 ಕರಪತ್ರ ಹಂಚುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ ಎಂದರು.

ಮಹಾಮಾರಿ ಕರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ದೇಶವನ್ನು ಪಾರು ಪಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು. ತುಂಗಾಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳ್ಳಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಪ್ಪಾಜಿಗೌಡ ಕಾರ‌್ಲಕುಂಟಿ, ಮುಖಂಡ ವಿಶ್ವನಾಥರೆಡ್ಡಿ ಅಮೀನಗಡ, ಬಸವಂತರಾಯ ಕುರಿ, ಕೆ. ಶರಣಬಸವ, ಶರಣಯ್ಯಸ್ವಾಮಿ ಗುಡದೂರು, ಬಸವರಾಜಸ್ವಾಮಿ ಹಸಮಕಲ್ಲ, ಶರಣಯ್ಯ ಸೊಪ್ಪಿಮಠ, ರವಿಗೌಡ ಪಾಟೀಲ, ಪ್ರಸನ್ನ ಪಾಟೀಲ, ಅಮರೇಶ ಮಾಟೂರು, ಶ್ರೀಧರ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net