ಮೀಸಲಾತಿ ಮಹಿಳೆಯರ ಏಳಿಗೆಗೆ ಸಹಕಾರಿ

Untitled design(6)
ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲು ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಕಾರಟಗಿಯ ರಾಮನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಗುರುವಾರ ಸಂಭ್ರಮಾಚರಿಸಲಾಯಿತು. ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಕುಮಾರಿ, ಮಂಡಲ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಹುಲಿಗೆಮ್ಮ ನಾಯಕ, ಮಂಡಲ ಪ್ರಧಾನಕಾರ್ಯದರ್ಶಿ ಮಂಜುನಾಥ ಮಸ್ಕಿ ಇತರರಿದ್ದರು.
Published on

ಕಾರಟಗಿ: ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ನ ಮೊದಲ ಅಧಿವೇಶನದಲ್ಲಿ ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ಮಸೂದೆ ಮಂಡಿಸಿರುವುದು ಶ್ಲಾಘನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಕುಮಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಾರಿಯರ ಶಕ್ತಿ ಬಲಪಡಿಸುವ ಕಾರ್ಯ

ಪಟ್ಟಣದ 14ನೇ ವಾರ್ಡ್ ರಾಮನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಏರ್ಪಡಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಹಲವು ದಶಕಗಳಿಂದ ಮಹಿಳೆಯರಿಗೆ ರಾಜಕೀಯ ಮೀಸಲು ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಆದರೆ, ಮೋದಿ ಅವರು ಗೌರಿಗಣೇಶ ಹಬ್ಬದ ಸಂಭ್ರಮದಲ್ಲಿ ನಾರಿಯರ ಶಕ್ತಿ ಬಲಪಡಿಸಲು ಮುಂದಾಗಿದ್ದಾರೆ. ಮೀಸಲಾತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ರಾಜಕೀಯ ಮುಂದಾಳತ್ವ ವಹಿಸಲಿದ್ದಾರೆ. ಬಹುದಶಕಗಳ ಕನಸನ್ನು ಪ್ರಧಾನಿ ನನಸು ಮಾಡಿ ಸ್ತ್ರೀಯರಿಗೆ ಶಕ್ತಿ ತುಂಬುವ ಜತೆಗೆ ಆತ್ಮಗೌರವ ಹೆಚ್ಚಳಕ್ಕೆ ಕಾರಣರಾಗಿದ್ದಾರೆ ಎಂದರು.

ಪ್ರಮುಖರಾದ ಕನಕಮ್ಮ, ರಾಜಮ್ಮ, ಹನುಮಮ್ಮ, ಯಲ್ಲಮ್ಮ, ಶರಣಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net