ಜನಸಾಮಾನ್ಯರ ಅನುಕೂಲಕ್ಕೆ ಸಾಕಷ್ಟು ಯೋಜನೆ

mkg1d
Published on

ಜಗಳೂರು: ಕರ್ನಾಟಕದ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಬಿಜೆಪಿ ವತಿಯಿಂದ ಪ್ರಧಾನಿ ಮೋದಿ ಅವರ 73ನೇ ಜನ್ಮದಿನ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಮಾತನಾಡಿದರು.

ಜಾಗತಿಕ ಜನಪ್ರಿಯ ನಾಯಕರಲ್ಲಿ ಪ್ರಧಾನಿ ಮೋದಿಯವರು ಮತ್ತೊಮ್ಮೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಮೋದಿ ಮತ್ತೆ ವಿಶ್ವದ ನಂಬರ್ 1 ಜನಪ್ರಿಯ ನಾಯಕರ ಪಟ್ಟಿಯಲ್ಲೇ ಮುಂದುವರಿದಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಮಾಜಿ ಅಧ್ಯಕ್ಷ ಡಿ.ವಿ. ನಾಗಪ್ಪ, ಬಿದರಕೆರೆ ರವಿಕುಮಾರ್, ಪಪಂ ಸದಸ್ಯ ಪಾಪಲಿಂಗಪ್ಪ, ದೇವರಾಜ್, ಪೂಜಾರ್ ಸಿದ್ದಪ್ಪ, ಹನುಮಂತಪ್ಪ, ನವೀನ್, ಓಬಳೇಶ್, ಪಲ್ಲಾಗಟ್ಟೆ ರೇವಣ್ಣ, ಸತೀಶ್, ಪ್ರವೀಣ್, ಕುಬೇಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net