ಪ್ರಧಾನಿ ಮೋದಿ ಏ.29ರಂದು ನಗರಕ್ಕೆ?

23-04-Shiva-1
ಪ್ರಧಾನಿ ಮೋದಿ ಕಾರ್ಯಕ್ರಮಕ್ಕಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿವಿಯಲ್ಲಿನ ಸ್ಥಳವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಬುಧವಾರ ವೀಕ್ಷಣೆ ನಡೆಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರರೆಡ್ಡಿ, ಉಪಾಧ್ಯಕ್ಷ ಕೆ.ಎಂ.ಪಾಟೀಲ್, ಪದಾಕಾರಿಗಳಾದ ಕೊಟ್ರೇಶಪ್ಪ ಕೋರಿ, ಶೇಖರ ವಾರದ್ ಇದ್ದರು.
Published on

ರಾಯಚೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಏ.29ರಂದು ಪ್ರಧಾನಿ ಮೋದಿ ನಗರಕ್ಕೆ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ರಾಯಚೂರು, ಕೊಪ್ಪಳ, ಬಳ್ಳಾರಿ ಕ್ಷೇತ್ರಗಳನ್ನು ಒಳಗೊಂಡಂತೆ ಪ್ರಧಾನಿ ಮೋದಿ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಬಿಜೆಪಿ ರಾಜ್ಯ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್‌ಗೆ ಸೂಕ್ತ ಸ್ಥಳ ಗುರುತಿಸುವಂತೆ ಸೂಚಿಸಿದ್ದಾರೆ.
ಈ ನಿಟ್ಟಿನಲ್ಲಿ ಡಾ.ಶಿವರಾಜ ಪಾಟೀಲ್ ಮತ್ತು ಪದಾಕಾರಿಗಳು ಕೃಷಿ ವಿಜ್ಞಾನ ವಿವಿಯ ಆಡಳಿತ ಕಚೇರಿ ಮುಂಭಾಗದಲ್ಲಿನ ಜಾಗವನ್ನು ಕಾರ್ಯಕ್ರಮ ನಡೆಸಲು ಸೂಕ್ತ ಎನ್ನುವ ಕಾರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
2018ರಲ್ಲಿ ಜರುಗಿದ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಇದೇ ಸ್ಥಳದಲ್ಲಿ ಪ್ರಚಾರ ಸಭೆ ನಡೆಸಲಾಗಿತ್ತು. ಅದಾದ ನಂತರದಲ್ಲಿ 2023ರಲ್ಲಿ ಸಿಂಧನೂರಿನಲ್ಲಿಯೂ ಮೋದಿ ಪ್ರಚಾರ ಸಭೆ ನಡೆದಿತ್ತು. ಆದರೆ ಮಳೆ ಕಾರಣಕ್ಕೆ ಸಭೆ ಅಸ್ತವ್ಯಸ್ತಗೊಳ್ಳುವಂತಾಗಿತ್ತು.
ಪಕ್ಷದ ಮೂಲಗಳ ಪ್ರಕಾರ ರಾಯಚೂರು ಜತೆಗೆ ಕೊಪ್ಪಳ ಕ್ಷೇತ್ರದ ಕನಕಗಿರಿ, ಮಸ್ಕಿ ಕ್ಷೇತ್ರಗಳ ಹೆಸರು ಕೂಡಾ ಕಾರ್ಯಕ್ರಮ ನಡೆಸಲು ಸೂಕ್ತ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಎಸ್‌ಪಿಜಿ ಅಕಾರಿಗಳು ಸ್ಥಳ ಅಂತಿಮಗೊಳಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net