ಪ್ರಧಾನಿ ಮೋದಿ ದೇಶದ ಶಕ್ತಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ

hn 27-2
Published on

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಎಂದರೆ ಒಂದು ದಿವ್ಯ ಚೈತನ್ಯ, ಅವರು ದೇಶದ ಶಕ್ತಿ. ಯಾರಿಗೂ ಗೊತ್ತಿಲ್ಲದೆ ಅದ್ಭುತವಾದ ಹಾಗೂ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಗುರುತಿಸುವ ಅವರ ಸ್ಫೂರ್ತಿದಾಯಕ ಮಾತುಗಳು ಸಾಧನೆಗೆ ಪ್ರೇರಣೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಬಿಜೆಪಿ ನೂತನ ಜಿಲ್ಲಾ ಕಾರ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದ ನಂತರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಅವರು ಕೈ ಮಗ್ಗ ಕಲೆ, ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಸಾಧಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅವರ ಸಾಧನೆಯನ್ನು ಶ್ಲಾಘಿಸಿದ್ದು ವಿಶೇಷ ಎಂದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಪ್ರತಿಯೊಬ್ಬರಿಗೂ ಮನೋಸ್ಥೈರ್ಯ ವೃದ್ಧಿಸುವಲ್ಲಿ ತಮ್ಮದೆ ಆದ ಪ್ರಮುಖ ಭೂಮಿಕೆ ನಿಭಾಯಿಸುತ್ತಿದೆ. ಈ ಮಾತುಗಳು ಸ್ಫ್ಪೂರ್ತಿಯ ಸಾಧನಗಳಾಗಿ ಸಾಧನೆಗೆ ಪ್ರೋತ್ಸಾಹ ನೀಡುತ್ತವೆ. ಯಾವ ರೀತಿ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಮೋದಿ ಅವರ ಮಾತುಗಳು ಪ್ರೇರಣೆ ಎಂದರು.

ದೇಶದ ಆಯ್ದ 10 ಜಿಲ್ಲೆಗಳಲ್ಲಿ ನೇರ ಸಂವಾದ ಕಾರ್ಯಕ್ರಮ ನಡೆಯಿತು. ಹಲವಾರು ಗಣ್ಯರು, ಹಿರಿಯ ಕಾರ್ಯಕರ್ತರು ಮೋದಿ ಅವರ ಮನದಾಳದ ಮಾತುಗಳ ಬಗ್ಗೆ ಸ್ಪಂದನೆಯ ಮಾತುಗಳನ್ನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಪಕ್ಷದ ಪ್ರಮುಖರಾದ ಉಮೇಶ ಕಾರಜೋಳ, ಭೀಮಾಶಂಖರ ಹದನೂರ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕುಮಾರಗೌಡ ಗಡಗಿ, ಮಲ್ಲಿಕಾರ್ಜುನ ಜೋಗೂರ, ಕೃಷ್ಣ ಗುನ್ನಾಳಕರ, ಮಳನಗೌಡ ಪಾಟೀಲ, ರಾಹುಲ್ ಜಾಧವ, ಕಿರಣ ಪಾಟೀಲ, ಮಹೇಶ ಒಡೆಯರ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net