ಹೊಳೆಹೊನ್ನೂರಿನಲ್ಲಿ ಜನೌಷಧ ಕೇಂದ್ರ ಉದ್ಘಾಟನೆ

13 smg 2
Published on

ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರವನ್ನು ಭಾನುವಾರ ಶಾಸಕ ಕೆ.ಬಿ.ಅಶೋಕ್​ನಾಯ್ಕ್ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಔಷಧಿ ದೊರಕಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧ ಕೇಂದ್ರ ಆರಂಭಿಸಿದ್ದಾರೆ. ಈ ಔಷಧ ಕೇಂದ್ರವು ಜನಸಾಮಾನ್ಯರಿಗೆ ಅತ್ಯಂತ ಅಗ್ಗದ ದರದಲ್ಲಿ ಗುಣಮಟ್ಟದ ಅಗತ್ಯ ಔಷಧ ಪೂರೈಸುತ್ತಿವೆ ಎಂದರು.

ಈ ವ್ಯವಸ್ಥೆಯನ್ನು ಜನಸಾಮಾನ್ಯರು ಉಪಯೋಗಿಸಿಕೊಳ್ಳಬೇಕು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಜನ ಹಿತ ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಹಲವು ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಮುಖಂಡರಾದ ವೆಂಕಟೇಶ್, ರಾಧಾಕೃಷ್ಣ, ನಂಜುಂಡಸ್ವಾಮಿ, ನಾಗರತ್ನಾ, ಅನಿಲ್, ಹೊಳೆಹೊನ್ನೂರು ಠಾಣಾಧಿಕಾರಿ ಸುರೇಶ್ ಹಾಗೂ ಅಂಗಡಿ ಮಾಲೀಕರು, ಸ್ಥಳೀಯರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net